

ಶಿವಮೊಗ್ಗ: ಜಿಲ್ಲಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಕನ್ನಡಪರ ಸಂಘಟನೆಗಳು, ಆಟೋ ರೀಕ್ಷಾ ಚಾಲಕರ ಸಂಘಗಳು, ವಿವಿಧ ಶಾಲಾ-ಕಾಲೇಜುಗಳಲ್ಲಿ ರಾಜ್ಯೋತ್ಸವದ ನಿಮಿತ್ತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ರೊ. ಅರುಣ್ ದೀಕ್ಷಿತ್ ಧ್ವಜಾರೋಹಣ ನೆರವೇರಿಸಿದರು. ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಛಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರೊ.ಎಂ.ಚಂದ್ರಶೇಖರಯ್ಯ, ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಟ್ರಸ್ಟ್ ಉಪಾಧ್ಯಕ್ಷ ರೊ. ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ಎಸ್.ಸಿ.ರಾಮಚಂದ್ರ, ಜಂಟಿ ಕಾರ್ಯದರ್ಶಿ ರೊ. ಎಸ್.ಆರ್.ನಾಗವೇಣಿ, ಖಜಾಂಚಿ ರೊ.ವಿಜಯ್ ಕುಮಾರ್, ರೊ.ಎನ್.ಬಿ.ಮಂಜುನಾಥ್, ಪ್ರಾಚಾರ್ಯ ಆರ್.ಸೂರ್ಯನಾರಾಯಣನ್, ಸಹ ಶಿಕ್ಷಕರಾದ ಪ್ರತಿಮಾ, ಕಾವ್ಯಾ, ಸುಪ್ರಿತಾ ಮೋಹನ್ ಉಪಸ್ಥಿತರಿದ್ದರು. ಸಭೆಯ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆಯಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪ್ರಾಚಾರ್ಯ ಬಿ.ಜಿ.ಚನ್ನಪ್ಪ, ಉಪನ್ಯಾಸಕ ಡಾ.ಎಸ್.ಕೆ.ಮೋಹನ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಅಣ್ಣಪ್ಪ ಎನ್.ಮಳೀಮಠ್, ಐಕ್ಯೂಎಸಿ ಸಂಚಾಲಕಿ ಡಾ. ವಿದ್ಯಾ ಮರಿಯಾ ಜೋಸೆಫ್ ಮತ್ತಿತರರು ಹಾಜರಿದ್ದರು.
ದುರ್ಗಿಗುಡಿ ಕನ್ನಡ ಸಂಘ: ನಗರದ ದುರ್ಗಿಗುಡಿ ಕನ್ನಡ ಸಂಘದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುಖ್ಯರಸ್ತೆಯಲ್ಲಿ ಕಲ್ಲಿನ ರಥದೊಳಗಿರುವ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಗೌರವಾಧ್ಯಕ್ಷ ಗಂಧದಮನೆ ನರಸಿಂಹ, ಅಧ್ಯಕ್ಷ ಎಸ್.ಕೆ.ಪ್ರಕಾಶ್, ಉಪಾಧ್ಯಕ್ಷ ಭರತೇಶ್, ಪ್ರಧಾನ ಕಾರ್ಯದರ್ಶಿ ಸ.ನ.ಮೂರ್ತಿ, ಸಹ ಕಾರ್ಯದರ್ಶಿಗಳಾದ ಗುರುರಾಜ್, ರವಿಕುಮಾರ್, ನಿರ್ದೇಶಕರಾದ ಎಂ.ರಾಕೇಶ್, ಗೋವಿಂದಣ್ಣ, ಪುಟ್ಟರಾಜು, ಲಿಂಗರಾಜು, ದಯಾನಂದ್, ಜಿ,ಚಂದ್ರಶೇಖರ್, ರಾಘವೇಂದ್ರ, ಕೃಷ್ಣಮೂರ್ತಿ, ಪ್ರಕಾಶ್ ಶ್ಯಾಮ್, ಪ್ರಸನ್ನ, ವಿ.ರಾಜು ಸೇರಿ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.