"ಫಸ್ಟ್ ನೈಟ್ ಹೇಳಿಕೆ ನೀಡಿರುವ ನಟಿ ರಚಿತಾ ರಾಮ್​​​ನ ಬ್ಯಾನ್ ಮಾಡಿ"

Untitled-3
Published on

ಚಾಮರಾಜನಗರ: 'ಲವ್ ಯು ರಚ್ಚು' ಚಿತ್ರದ ಸುದ್ದಿಗೋಷ್ಠಿಯಲ್ಲಿ ಹಾಡೊಂದರ ಇಂಟಿಮೇಟ್​ ಸೀನ್​ಗಳ ಬಗ್ಗೆ ಪ್ರಶ್ನಿಸಿದಾಗ ಫಸ್ಟ್ ನೈಟಲ್ಲಿ ಎಲ್ರೂ ಏನು ಮಾಡ್ತಾರೋ ಅದನ್ನೇ ಮಾಡಿದೀವಿ ಎಂಬ ಹೇಳಿಕೆ ನೀಡಿದ್ದ ನಾಯಕ ನಟಿ ರಚಿತಾ ರಾಮ್​​ಅನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಕನ್ನಡ ಕ್ರಾಂತಿ ದಳ ಒತ್ತಾಯಿಸಿದೆ.

ಈ ಸಂಬಂಧ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ನಟಿ ರಚಿತಾ ರಾಮ್ ಲವ್ ಯು ರಚ್ಚು ಚಿತ್ರದಲ್ಲಿ ಮಾಧ್ಯಮಗಳಿಗೆ ಫಸ್ಟ್ ನೈಟ್ ಬಗ್ಗೆ ಪ್ರಶ್ನಿಸಿದ್ದಾರೆ. ಒಬ್ಬ ನಟಿಯಾಗಿ ಗೌರವಯುತವಾಗಿ ಮಾತನಾಡದೆ ನಾಚಿಕೆ ಇಲ್ಲದೆ ನಾಲಿಗೆ ಹರಿಬಿಟ್ಟಿರುವ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ಷ್ಮವಾಗಿ ಪರಿಗಣಿಸಿ ನಿಷೇಧ ಹೇರಬೇಕು. ಕ್ಷಮೆ ಯಾಚಿಸದಿದ್ದರೆ ಚಿತ್ರ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.

ಸಂಘಟನೆಯ ಗೌರವಾಧ್ಯಕ್ಷ ನಾಗರಾಜು ಮಾತನಾಡಿ, ಐ ಲವ್ ಯು ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟಿ ರಚಿತಾ ರಾಮ್ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು‌. ಈಗ ಮತ್ತೆ ಇಂತಹದ್ದೇ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಪ್ರಶ್ನೆ ಮಾಡಿದರೆ ನಾಚಿಕೆ ಇಲ್ಲದೆ ಫಸ್ಟ್ ನೈಟ್ ಕುರಿತು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅನೇಕ ನಟಿಯರು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಚಿತಾ ರಾಮ್ ಈ ರೀತಿ ಅಸಭ್ಯವಾಗಿ ಮಾತನಾಡಿ ನಮ್ಮ ಸಂಸ್ಕ್ರತಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net