

ತಿರುವನಂತಪುರಂ: ಖ್ಯಾತ ಚಲನಚಿತ್ರ ಸಂಪಾದಕ ನಿಶಾದ್ ಯೂಸುಫ್(Nishadh Yusuf) ಬುಧವಾರ(ಅ.30) ಕೇರಳದ ಪನಂಪಲ್ಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ವಿವರ ನೀಡಿಲ್ಲ.
ಯೂಸುಫ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಎಡಿಟಿಂಗ್ ಕೆಲಸಕ್ಕೆ ಪರಿಣಿತಿಪಡೆದವರಾಗಿದ್ದು, 2022 ರಲ್ಲಿ ಮಲಯಾಳಂನ ತಲ್ಲುಮಾಲಾ ಎಡಿಟ್ಗಾಗಿ ಕೇರಳದ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.
ಯೂಸುಫ್ ಚಾವೆರ್, ಉಂಡಾ, ಸೌದಿ ವೆಲ್ಲಕ್ಕ, ಒನ್, ಆಪರೇಷನ್ ಜಾವಾ ಮತ್ತು ಕಂಗುವ ಸೇರಿದಂತೆ ಹಲವು ಚಲನಚಿತ್ರಗಳ ಎಡಿಟ್ ಮಾಡಿದ್ದಾರೆ. ಮಮ್ಮುಟ್ಟಿ ನಟಿಸಿದ ಆಕ್ಷನ್ ಥ್ರಿಲ್ಲರ್ ಚಲನಚಿತ್ರ ಬಾಜೂಕಾದಲ್ಲಿ ಸಹ ಇವರ ಪ್ರಭಾವ ಎತ್ತಿತೋರುವಂತಿದೆ. ಇವರು ಉದ್ಯಮದಲ್ಲಿ ಬೇಡಿಕೆಯ ಎಡಿಟರ್ಆಗಿದ್ದರು.