ಉದ್ಧವ್​ ಠಾಕ್ರೆ ಕುರಿತ ಕಂಗನಾ ಭವಿಷ್ಯ ನಿಜವಾಯ್ತಾ? "ಮಹಾ"ಸರ್ಕಾರದ ಬಗ್ಗೆಗಿನ ಕಂಗನಾ ವಿಡಿಯೋ ವೈರಲ್​!

Kangana-Udhav
Published on

ಮುಂಬೈ: ಬಾಲಿವುಡ್​ ಹಾಗೂ ರಾಜಕೀಯ ವ್ಯಕ್ತಿಗಳ ಕುರಿತು ಆಗ್ಗಾಗ್ಗೆ ಬಹಿರಂಗವಾಗಿ ಕಟುಟೀಕೆ ಮಾಡುವ ನಟಿ ಕಂಗನಾ ರಣಾವತ್​ ಅವರ ಹಳೆ ಟ್ವೀಟ್​ ಈಗ ಭಾರೀ ವೈರಲ್​ ಆಗುತ್ತಿದೆ.

ಹಿಂದೊಮ್ಮೆ ಮುಂಬೈಯಲ್ಲಿರುವ ಕಂಗನಾ ಕಚೇರಿ ಕಟ್ಟಡವನ್ನು ಅಲ್ಲಿನ ಪಾಲಿಕೆ ನೆಲಸಮಗೊಳಿಸಿತ್ತು. ಈ ವೇಳೆ ರೊಚ್ಚಿಗೆದ್ದ ಕಂಗನಾ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಟ್ವೀಟ್​ ಮೂಲಕ ಟೀಕಿಸಿದ್ದರು.

ಇದೀಗ ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೂ, ಕಂಗನಾ ಅಂದು ನೀಡಿದ್ದ ಹೇಳಿಕೆಗೂ ಸಾಮ್ಯತೆ ಇರುವುದರಿಂದ ಈ ವಿಡಿಯೋ ಈಗ ಭಾರೀ ವೈರಲ್​ ಆಗುತ್ತಿದೆ. ಕಂಗನಾ ಅಂದು ಹೇಳಿದ್ದ ಮಾತು ಇಂದು ನಿಜವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಭಾರೀ ಸದ್ದು ಮಾಡುತ್ತಿದೆ.

ಸದ್ಯ ಈಗ ಮಹಾರಾಷ್ಟ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಅವರು ಬಾಂದ್ರಾದ ಮಲಬಾರ್​​ ಹಿಲ್​ನಲ್ಲಿರುವ ಖಾಸಗಿ ನಿವಾಸಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ಇದು ಈಗ ಕಂಗನಾ ಅವರ ಹೇಳಿಕೆಯನ್ನೇ ಹಿಡಿದು ಟ್ವಿಟ್ಟಿಗರು ಉದ್ಧವ್​ ಠಾಕ್ರೆ ಸ್ಥಿತಿಗೂ ಯಾವುದೇ ಭಿನ್ನವಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಅಕ್ರಮ ನಿರ್ಮಾಣದ ಆರೋಪದ ಮೇಲೆ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮೆನೆ ಮುರಿದಿದೆ, ನಾಳೆ ನಿನ್ನ ಅಹಂಕಾರವೂ ಮುರಿಯಲಿದೆ ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸದ್ಯ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net