VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ ಸೆಲ್​ನಲ್ಲಿ ಬಿಡಬೇಕು: ನಟಿ ಕಂಗನಾ ರಣಾವತ್​

KANGANA
Published on

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ ಹೇಳಿಕೆಗೆ ಕಿಡಿ ಕಾರಿರುವ ನಟಿ, ಇಂತಹ ಹೆಣ್ಣುಮಕ್ಕಳೇ ರಾಕ್ಷಸ ಮತ್ತು ರೇಪಿಸ್ಟ್​ ಮಕ್ಕಳಿಗೆ ಜನ್ಮ ನೀಡುವುದು ಎಂದಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸಂತ್ರಸ್ಥೆಯ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಮಾಡಿರುವ ಟ್ವೀಟ್​ ಮಾಡಿದ್ದರು.

ಇಂದಿರಾ ಜೈಸಿಂಗ್​ ಅವರು ಮಾನವ ಹಕ್ಕುಗಳ ಹೆಸರಿನಲ್ಲಿ ಹಣ ಮಾಡಲು ಈ ರೀತಿ ಹೇಳುತ್ತಿದ್ದಾರೆ, ನನಗೆ ಅವರ ಸಲಹೆ ಅಗತ್ಯ ಇಲ್ಲ ಎಂದು ಸಂತ್ರಸ್ಥೆ ತಾಯಿ ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರಾಜೀವ್​ ಗಾಂಧಿ ಹಂತಕರಲ್ಲಿ ಒಬ್ಬಳಾದ ನಳಿನಿಯನ್ನು ಕ್ಷಮಿಸಿ ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೇ ರೀತಿ ಆಶಾದೇವಿ ಅವರು ಅಪರಾಧಿಗಳನ್ನು ಕ್ಷಮಿಸಿ ಮಾದರಿಯಾಗಬೇಕು ​ ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರು ಎಂದು ಟ್ವೀಟ್​ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net