

ಮುಂಬೈ: ( Kangana Ranaut ) ವಿಶ್ವಾದ್ಯಂತ ಬಿಡುಗಡೆಯಾದ ಪುಷ್ಪ 2 ಚಿತ್ರ ಈಗಾಗಲೇ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತೆಲುಗು ಅಲ್ಲದೆ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅಲ್ಲು ಅರ್ಜುನ್ ಅವರ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಬಾಲಿವುಡ್ ನೆಲದಲ್ಲಿ ಪುಷ್ಪ ರಾಜ್ ಹಬ್ಬುತ್ತಿದ್ದಾರೆ. ಈಗಾಗಲೇ ಅಲ್ಲಿನ ಕಲೆಕ್ಷನ್ ಸುಮಾರು ರೂ. 500 ಕೋಟಿ ಸಮೀಪಿಸುತ್ತಿದೆ. ಪುಷ್ಪ 2 ಬಾಲಿವುಡ್ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಹಿನ್ನಲೆಯಲ್ಲಿ ಬಾಲಿವುಡ್ ಖ್ಯಾತ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಕಂಗನಾ ರಣಾವತ್ ಅವರ ಪುಷ್ಪಾ 2 ಸಿನಿಮಾವನ್ನು ಹೊಗಳಿದ್ದಾರೆ.
'ಹಿಂದಿ ಚಿತ್ರರಂಗಕ್ಕೆ ವಾಸ್ತವವನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಸೌತ್ ಚಿತ್ರಗಳಿಗೆ ಸರಿಸಾಟಿಯಾಗುತ್ತಿಲ್ಲ. ಬಾಲಿವುಡ್ ಗ್ಲಾಮರ್ ಗೀಳಾಗಿದೆ. ಅನೇಕ ಹೀರೋಗಳು, ನಿರ್ದೇಶಕರು ಸಿಕ್ಸ್ ಪ್ಯಾಕ್ , ಹಾಟ್ ಬೇಬ್, ಬೀಚ್, ಐಟಂ ನಂಬರ್ ಗಳನ್ನು ಬಯಸುತ್ತಾರೆ. ಅವರಿಗೆ ಇಷ್ಟು ಸಾಕು. ಆದರೆ ರಿಯಾಲಿಟಿ ಚೆಕ್ ಇಲ್ಲ. ಬಾಲಿವುಡ್ ನಟರು ಆರಾಮ ವಲಯದಲ್ಲಿ ಇರುತ್ತಾರೆ. ಹೊರ ಬರುತ್ತಿಲ್ಲ. ಬಾಲಿವುಡ್‌ನಲ್ಲಿ ಪುಷ್ಪ 2 ನಂತಹ ಚಿತ್ರ ಮಾಡಲು ಸಾಧ್ಯವಿಲ್ಲವಾ? ಎಂದು ಕಂಗನಾ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ.
ಸುಕುಮಾರ್ ನಿರ್ದೇಶನದ ಪುಷ್ಪ 2 ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕರಾಗಿದ್ದಾರೆ. ರಾಷ್ಟ್ರೀಯ ಖ್ಯಾತಿಯ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಫಹಾದ್ ಫಾಜಿಲ್ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.
ಸುನೀಲ್, ಅನಸೂಯ, ಜಗಪತಿ ಬಾಬು, ಜಗದೀಶ್, ರಾವ್ ರಮೇಶ್, ತಾರಕ್ ಪೊನ್ನಪ್ಪ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶ್ರೀಲೀಲಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.