ಉಗುಳಿದ ರೊಟ್ಟಿಯ ವೀಡಿಯೋ ಟ್ವೀಟ್ ಮಾಡಿ ಸೋನುವನ್ನು ಅಣಕಿಸಿದ ಕಂಗನಾ! ಕಾರಣ ಇದೇ ನೋಡಿ..

sonu- kangana
Published on

ನವದೆಹಲಿ: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ನಟ ಸೋನು ಸೂದ್ ವಿರುದ್ಧ ಕಿಡಿಕಾರಿದ್ದಾರೆ. ಅಂಗಡಿಯವನೊಬ್ಬ ಆಹಾರದಲ್ಲಿ ಉಗುಳುತ್ತಿರುವ ದೃಶ್ಯ ವೈರಲ್ ಆಗಿರುವ ವಿಡಿಯೋಗೆ ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ. ಈ ಟ್ವೀಟ್ ನಲ್ಲಿ ಕಂಗನಾ ಸೋನು ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಕ್ಕಾಗಿ ಅಲ್ಲ, ವಿವಾದದಿಂದಾಗಿ. ವಾಸ್ತವವಾಗಿ, ಸೋನು ಸೂದ್ ಟ್ವೀಟ್‌ನಲ್ಲಿ ತನ್ನನ್ನು ಭಗವಾನ್ ರಾಮನಿಗೆ ಹೋಲಿಸಿಕೊಂಡಿದ್ದಾರೆ.

ವಿವಾದ ಶುರುವಾಗಿದ್ದು ಹೇಗೆ?: ಸಾವನ್ ಜುಲೈ 22 ರಂದು ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶ ಸರ್ಕಾರವು ಕನ್ವಾಡಿ ಮಾರ್ಗದಲ್ಲಿರುವ ಆಹಾರದ ಅಂಗಡಿಗಳ ಹೊರಗೆ ಯಾವುದೇ ಗೊಂದಲವಾಗದಂತೆ ಅಂಗಡಿಯವರು ನಾಮಫಲಕ ಅಳವಡಿಸಲು ಸೂಚಿಸಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಅಸಮಾಧಾನ ಹೊರಹಾಕಿದ್ದವು. ಈ ಆದೇಶದ ಬಗ್ಗೆ ಸೋನು ಸೂದ್ ಕೂಡ ಟ್ವೀಟ್ ಮಾಡಿದ್ದಾರೆ. ಸೋನು ಸೂದ್ ಟ್ವೀಟ್ ಮಾಡಿ, ಪ್ರತಿ ಅಂಗಡಿಯಲ್ಲಿ ಮಾನವೀಯತೆ ಎಂಬ ಒಂದೇ ನಾಮಫಲಕ ಇರಬೇಕು ಎಂದು ಬರೆದುಕೊಂಡಿದ್ದಾರೆ.

ಇದಾದ ನಂತರ, ಅಂಗಡಿಯವನು ಜನರ ಆಹಾರದಲ್ಲಿ ಉಗುಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 'ಎಕ್ಸ್​' ಬಳಕೆದಾರ ಸುಧೀರ್ ಮಿಶ್ರಾ ಅವರು ಸೋನು ಸೂದ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಸೋನು ಸೂದ್‌ಗೆ ಉಗುಳಿರುವ ರೊಟ್ಟಿಯನ್ನು ಪಾರ್ಸೆಲ್ ಮಾಡಬೇಕು. ಹಾಗೆ ಮಾಡಿದರೆ ಸಹೋದರತ್ವವು ಹಾಗೇ ಉಳಿಯುತ್ತದೆ ಎಂದು ಬರೆದಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸೋನು ಸೂದ್, ನಮ್ಮ ಶ್ರೀರಾಮ ಜೀ ಅವರು ಶಬರಿಯ ಎಂಜಲು ಹಣ್ಣುಗಳನ್ನು ತಿಂದಿದ್ದರು. ಹಾಗಾಗಿ ನಾನು ಎಂಜಲು ಉಗುಳಿದ ರೊಟ್ಟಿಯನ್ನು ಏಕೆ ತಿನ್ನಬಾರದು ಎಂದು ಬರೆದಿದ್ದಾರೆ. ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು ಎಂದು ಬರೆದುಕೊಂಡಿದ್ದರು.

ಆಹಾರದಲ್ಲಿ ಎಂಜಲು ಉಗಿದವನನ್ನು ಸಮರ್ಥಿಸಿಕೊಂಡಿದ್ದ ಸೋನು ಸೂದ್ ಅವರ ಟ್ವೀಟ್‌ಗೆ ಮರುಪೋಸ್ಟ್ ಮಾಡಿದ ಕಂಗನಾ ಹೀಗೆ ಬರೆದಿದ್ದಾರೆ, 'ಮುಂದೆ, ದೇವರು ಮತ್ತು ಧರ್ಮದ ಕುರಿತು ಅವರ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ಸೋನು ಜಿ ತಮ್ಮದೇ ಆದ ರಾಮಾಯಣವನ್ನು ನಿರ್ದೇಶಿಸಲಿದ್ದಾರೆ. ವಾಹ್, ಎಂತಹ ಟ್ರೀಟ್, ಬಾಲಿವುಡ್‌ನಿಂದ ಮತ್ತೊಂದು ರಾಮಾಯಣ ಎಂದು ಕುಟುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net