ಕಿರುಕುಳದ ಆರೋಪ..ಪೋಲೀಸರ ಮುಂದೆ ಹಾಜರಾಗಲಿರುವ ಪೂಜಾ ಖೇಡ್ಕರ್!

pooja
Published on

ಮುಂಬೈ: ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಪುಣೆಯ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ವಿರುದ್ಧ ಕಿರುಕುಳದ ದೂರು ನೀಡಿರುವ ಹಿನ್ನೆಲೆಯಲ್ಲಿ ಪುಣೆ ಪೊಲೀಸರ ಎದುರು ಶನಿವಾರ (ಜುಲೈ 20) ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಲಿದ್ದಾರೆ.

ದೂರು ನೀಡಿದ ಬಳಿಕ ಖೇಡ್ಕರ್ ಗೆ ಸಮನ್ಸ್‌ ನೀಡಲಾಗಿತ್ತು. ಆದರೆ ಅವರು ಪೊಲೀಸರ ಎದುರು ಹಾಜರಾಗಿರಲಿಲ್ಲ. ಹೀಗಾಗಿ ಜು.20ರಂದು ಹಾಜರಾಗುವಂತೆ ಪುಣೆ ಪೊಲೀಸರು ಹೊಸ ಸಮನ್ಸ್ ಅನ್ನು ಹೊರಡಿಸಿದದ್ದಾರೆ. ಹೀಗಾಗಿ ಹಾಜರಾಗುವುದಾಗಿ ಆಕೆ ತಿಳಿಸಿದ್ದು, 'ನಾವು ಕಾಯುತ್ತೇವೆ' ಎಂದು ಪುಣೆಯ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.

ಜುಲೈ 18 ರಂದು ಪೊಲೀಸರ ಮುಂದೆ ಹಾಜರಾಗಲು ಆಕೆಗೆ ಸಮನ್ಸ್ ನೀಡಲಾಗಿತ್ತು ಆದರೆ ಅವರು ಹಾಜರಾಗಲಿಲ್ಲ ಎಂದು ಕಮಿಷನರ್ ಹೇಳಿದರು. ಶನಿವಾರವೂ ಖೇಡ್ಕರ್ ಹಾಜರಾಗಲು ವಿಫಲವಾದರೆ ಪೊಲೀಸರು ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ. ಮುಂದಿನ ಕ್ರಮವನ್ನು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಐಎಎಸ್ ತರಬೇತಿಯ ಭಾಗವಾಗಿ ಪೂಜಾ ಖೇಡ್ಕರ್ ರನ್ನು ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರ ಅಡಿಯಲ್ಲಿ ನೇಮಿಸಲಾಯಿತು, ಆದರೆ ಆಕೆ ವಿಶೇಷ ಸೌಲಭ್ಯಗಳನ್ನು ಒತ್ತಾಯಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಔಪಚಾರಿಕ ದೂರು ನೀಡಿದ್ದರು. ಆದರೆ ಪೂಜಾ ಡಿಸಿ ವಿರುದ್ಧವೇ ದೂರು ನೀಡಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರಿಂದ ಪೊಲೀಸರು ತನಿಖೆಗೆ ಕರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net