'ಬಾಲಿವುಡ್​ ನಲ್ಲಿ ನನಗೆ ಸ್ನೇಹಿತರೇ ಇಲ್ಲ' ಕಂಗನಾ ಹೀಗೆನ್ನಲು ಕಾರಣ ಇದೆ ನೋಡಿ..

kangana ranouth
Published on

ಮುಂಬೈ: ಬಾಲಿವುಡ್​ನಲ್ಲಿ ನಡೆಯುವ ಪಾರ್ಟಿಗಳ ಬಗ್ಗೆ ನಟಿ, ಸಂಸದೆ ಕಂಗನಾ ರನೌತ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಅವರು, ಬಾಲಿವುಡ್‌ ಮೇಲೆ ತನಗಿರುವ ಅಸಂತೃಪ್ತಿಯನ್ನು ಮತ್ತೊಮ್ಮೆ ಹೊರಹಾಕಿದರು.

ಬಾಲಿವುಡ್‌ನಲ್ಲಿ ನಿಮಗೆ ಸ್ನೇಹಿತರಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ.. "ನಾನು ಬಾಲಿವುಡ್ ಗೆ ಹೊಂದಿಕೊಳ್ಳುವ ವ್ಯಕ್ತಿತ್ವದವಳು ಅಲ್ಲ. ಅದಕ್ಕೇ ನನಗೆ ಅಲ್ಲಿ ಸ್ನೇಹಿತರಿಲ್ಲ. ನನ್ನ ಮತ್ತು ಅವರೆಲ್ಲರ ಜೀವನಶೈಲಿ ವಿಭಿನ್ನ. ಅವರಲ್ಲು ಬಹುತೇಕ ಮಂದಿ ಶೂಟಿಂಗ್ ಇಲ್ಲದಿದ್ದರೆ ಬೆಳಗ್ಗೆ ಜಿಮ್‌ಗೆ ಹೋಗುತ್ತಾರೆ. ಮಧ್ಯಾಹ್ನ ಮಲಗಿ ಸಂಜೆ ವ್ಯಾಯಾಮ ಮಾಡಿ, ಟಿವಿ ನೋಡಿ ನಿದ್ದೆ ಮಾಡ್ತಾರೆ. ಸಮಾಜದಲ್ಲಿ ಏನಾಗ್ತಿದೆ ಅನ್ನೋದು ಅವರಿಗೆ ಗೊತ್ತಿಲ್ಲ. ಅಂತಹವರ ಜೊತೆ ಯಾವ ರೀತಿಯಲ್ಲಿ ಸ್ನೇಹ ಮಾಡಲಿ? ಸಮಾಜದಲ್ಲಿ ಏನು ನಡೆಯುತ್ತದೆ ಎಂಬುದರ ಬಗ್ಗೆ ಆಸಕ್ತಿ ತೋರುವುದಿಲ್ಲ. ಉಆವಾಗಲೂ ಬೆಲೆ ಬಾಳುವ ಬಟ್ಟೆಗಳು, ವಸ್ತುಗಳ ಬಗ್ಗೆಯೇ ಮಾತನಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ಭಿನ್ನವಾಗಿ ಮಾತನಾಡುವ ವ್ಯಕ್ತಿ ಸಿಗುವುದು ಅಪರೂಪವೇ ಸರಿ ಎಂದು ಅಭಿಪ್ರಾಯಪಟ್ಟರು.

ಇಂಡಸ್ಟ್ರಿಯಲ್ಲಿ ನಡೆಯುವ ಪಾರ್ಟಿಗಳ ಬಗ್ಗೆ ಮಾತನಾಡಿ, ಅಲ್ಲಿ ಅವರು ಮಾತನಾಡುವ ಮಾತುಗಳು ತನಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತವೆ. ನನ್ನ ದೃಷ್ಟಿಯಲ್ಲಿ ಬಾಲಿವುಡ್ ಪಾರ್ಟಿಗಳು 'ಅಪಾಯಕಾರಿ' ಎಂದು ಹೇಳಿದರು.

ಕಂಗನಾ ಪ್ರಸ್ತುತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ರಾಜಕೀಯ ಜೀವನಾಧಾರಿತ ಚಿತ್ರ ‘ಎಮರ್ಜೆನ್ಸಿ’ ಯಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 6 ರಂದು ಪ್ರೇಕ್ಷಕರ ಮುಂದೆ ಚಿತ್ರ ಬರಲಿದೆ.

#highcash #transacti

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net