

ಮುಂಬೈ: ಬಿಟೌನ್ ಕ್ವೀನ್ ಕಂಗನಾ ರಣಾವತ್ ಅವರ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 6ರಂದು ರಿಲೀಸ್ ಆಗಬೇಕಿದ್ದ ಎಮರ್ಜೆನ್ಸಿ ಸಿನಿಮಾ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ ಗ್ರೀನ್ ಸಿಗ್ನಲ್ ಸಿಗದೆ ಇಕ್ಕಟ್ಟಿನಲ್ಲಿ ಸಿಲುಕಿದೆ. ಇದೇ ಸಮಯದಲ್ಲಿ ನಟಿ ಕಂಗನಾ ತಮ್ಮ ಮುಂದಿನ ಪ್ರಾಜೆಕ್ಟ್ ಅನ್ನು ಘೋಷಿಸಿದ್ದಾರೆ.
ಕಂಗನಾ ರಣಾವತ್ ಅವರು ತಮ್ಮ ಮುಂದಿನ ಸಿನಿಮಾ ಭಾರತ ಭಾಗ್ಯ ವಿಧಾತ ಎಂದು ಘೋಷಿಸಿದ್ದಾರೆ. ಈ ಸಿನಿಮಾವನ್ನು ಮನೋಜ್ ತಪಾಡಿಯಾ ನಿರ್ದೇಶಿಸಲಿದ್ದಾರೆ. ಆದಿ ಮತ್ತು ತಂಡದೊಂದಿಗೆ ನಟಿ ಕಂಗಣಾ ಪೋಸ್ ನೀಡುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ.
ಸಿನಿಮಾ ಬಗ್ಗೆ ನಟಿ ಕಂಗನಾ, #BharatBhagyaVdhaata ಪ್ರೇಕ್ಷಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುವ ಭರವಸೆ ಇದೆ. ನಿಜ ಜೀವನದ ಹೀರೋಯಿಸಂನ ಮ್ಯಾಜಿಕ್ ಅನ್ನು ದೊಡ್ಡ ಪರದೆಯ ಮೇಲೆ ಅನುಭವಿಸಿ! ಭಾರತ ಭಾಗ್ಯ ವಿಧಾತ, ಹಾಡದ ನಾಯಕರಿಗೆ ಸಿನಿಮೀಯ ಗೌರವವನ್ನು ನೀಡಲು ಸಂತೋಷವಾಗಿದೆ. ಈ ಶಿರ್ಷಿಕೆಯು ಸಿನಿಮಾದ ಮೂಲಕ ಸ್ಪೂರ್ತಿದಾಯಕ ಕಥೆಗಳಿಗೆ ಜೀವ ತುಂಬುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
CBFC ಪ್ರಮಾಣೀಕರಣವನ್ನು ಪಡೆಯಲು ಸಾಕಷ್ಟು ಸವಾಲುಗಳು ಎದುರಾಗಿರುವ ಎಮರ್ಜೆನ್ಸಿ ಸಿನಿಮಾ ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತಿತ್ತು. ಆದರೀನ್ನು ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)