ಕರ್ನಾಟಕ ಕಲಾದರ್ಶಿನಿ‌ ತಂಡದಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ

85
Published on

ಬೆಂಗಳೂರು: ಕರ್ನಾಟಕ ಕಲಾದರ್ಶಿನಿ‌ ತಂಡದ‌ ಗಿರಿನಗರ ಶಾಖೆಯ ಬಾಲ ಕಲಾವಿದರು ಗಿರಿನಗರದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಶ್ರೀರಾಮಚಂದ್ರಪುರ ಮಠದ ಸಂಯೋಜಕ ವಾದಿರಾಜ‌ ಸಾಮಗ ಉದ್ಘಾಟಿಸಿದರು. ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ ಅವರು ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಒಯ್ಯುವ ಮಹತ್ವದ ಬಗ್ಗೆ ವಿವರಿಸಿದರು.

ಮಹಾಭಾರತದ ಕಥಾನಕ ಒಂದನ್ನು ಆಧರಿಸಿದ ಈ ಪ್ರಸಂಗದಲ್ಲಿ ಬಲರಾಮನ ಮಗಳು ಕನಕಾಂಗಿಯ ವಿವಾಹದ ಕುರಿತಾಗಿ ಕೌರವನ ಮಗ ಲಕ್ಷಣ ಮತ್ತು‌ ಸುಭದ್ರೆಯ ಮಗ ಅಭಿಮನ್ಯುವಿನ ನಡುವಿನ ಗೊಂದಲದ ಹಾಗೂ ಕೃಷ್ಣನ ಚತುರತೆಯ ವಿನೋದಕರ ಪ್ರಸಂಗವನ್ನು ಮಕ್ಕಳು ಸುಲಲಿತವಾಗಿ ಅಭಿನಯಿಸಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ಮೃದಂಗ ಮತ್ತು ಚಂಡ ವಾದಕರಾಗಿ ರಾಘವೇಂದ್ರ ಬಿಡುವಾಳ, ಸುಬ್ರಹ್ಮಣ್ಯ ಸಾಸ್ತಾನ ಭಾಗವಹಿಸಿದರು.

ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ ಅವರ ಮಾರ್ಗದರ್ಶನದಲ್ಲಿ ಪೂರ್ವರಂಗ ಮತ್ತು ಯಕ್ಷಗಾನ ಪ್ರಸಂಗವನ್ನು ಮಕ್ಕಳು ಪ್ರದರ್ಶಿಸಿದರು. ಬಾಲ‌ ಕಲಾವಿದರಾಗಿ ಸುಧನ್ವ ಭಟ್, ರಮ್ಯಶ್ರೀ, ರಘುವೀರ್ ಪಾಂಗಣ್ಣಾಯ ಎಸ್.ಬಿ, ಧೃತಿ ಅಮ್ಮೆಂಬಳ, ಅಭಿಶ್ರೀ, ಶ್ರೀಹರ್ಷ ಭಟ್ಟ, ಶ್ರೇಯಸ್ ಸರಳಾಯ, ಶ್ರೀವತ್ಸ ಸರಳಾಯ, ಆಯುಷ್ ಎಸ್, ಕೃಷ್ಣ ಭಟ್, ಸಾಯಿ ಪ್ರಣಾಮ್, ಸೃಷ್ಟಿ ಚೇತನ್ ಜಯಂತ, ಕೃತಿ ಅಮ್ಮೆಂಬಳ, ಇಶಾನಿ ಎಸ್, ಶ್ರೇಷ್ಠ ಚೇತನ್ ಜಯಂತ ಪಾತ್ರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net