ಚುನಾವಣಾ ಪ್ರಚಾರದಲ್ಲಿ ಇಡ್ಲಿ ನೆನೆಸಿಕೊಂಡ ಕಮಲಾ ಹ್ಯಾರಿಸ್​...!

kiamala harris
Published on

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್, ತಮ್ಮ ತಾಯಿಯೊಂದಿಗೆ ಚೆನ್ನೈ ಬೀಚ್​ನಲ್ಲಿ ನಡೆದಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಜನಪ್ರಿಯ ತಿನಿಸು ಇಡ್ಲಿಯ ಸ್ವಾದವಿನ್ನೂ ಅವರ ಸ್ಮತಿಪಟಲದಿಂದ ಮರೆಯಾಗಿಲ್ಲ. ‘ಬಿಡೆನ್​ಗಾಗಿ ದಕ್ಷಿಣ ಏಷ್ಯನ್ನರು’ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲಾ ತಮ್ಮ ತಾಯಿ ಶ್ಯಾಮಲಾ, ಸೋದರಿ ಮಾಯಾ ಹಾಗೂ ತಮ್ಮನ್ನು ಚೆನ್ನೈನ ಸಾಗರ ತೀರದಲ್ಲಿ ವಾಯು ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಾತನೂ ಜೊತೆಗಿರುತ್ತಿದ್ದರು ಎಂದು ಹೇಳಿದರು. ಇಡ್ಲಿ ಕುರಿತು ಪ್ರೀತಿ ಬೆಳೆಸಿಕೊಳ್ಳಲು ತಾಯಿ ಶ್ಯಾಮಲಾ ಹೇಳಿಕೊಟ್ಟಿದ್ದರು ಎಂದು ವಿವರಿಸಿದರು.

ತಾತ ಪಿ.ವಿ. ಗೋಪಾಲನ್ ಕಲಿಸಿದ ಪಾಠಗಳೇ ತಾನು ಇಂದಿನ ಸ್ಥಿತಿಯಲ್ಲಿರಲು ಕಾರಣ ಹಾಗೂ ಪ್ರೇರಣೆ ಎಂದು ಕಮಲಾ ನುಡಿದರು. 19 ವರ್ಷದವರಿದ್ದಾಗ ಅಮೆರಿಕಕ್ಕೆ ಆಗಮಿಸಿದ್ದ ತಮಳುನಾಡಿನ ಶ್ಯಾಮಲಾ, ಕ್ಯಾನ್ಸರ್ ಸಂಶೋಧಕಿ ಹಾಗೂ ಹೋರಾಟಗಾರ್ತಿಯಾಗಿ ರೂಪುಗೊಂಡಿದ್ದರು.

ಭಾರತ ಪ್ರಮುಖ ಪಾಲುದಾರ: ಜೋ ಬಿಡೆನ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರೆ ಅವರ ಆಡಳಿತದಲ್ಲಿ ಭಾರತಕ್ಕೆ ಒಂದು ಪ್ರಮುಖ ಪಾತ್ರ ಸಿಗಲಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಂಥ ಜಾಗತಿಕ ವೇದಿಕೆಗಳಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕೆಂದು ಬಿಡೆನ್ ಆಡಳಿತ ಪ್ರತಿಪಾದಿಸಲಿದೆ ಎಂದು ಬಿಡೆನ್ ಪ್ರಚಾರ ಕಾರ್ಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net