'ಕಲ್ಕಿ 2898 AD' ಟ್ರೈಲರ್ ಔಟ್​​; ದಶಕದ ಟ್ರೈಲರ್ ಎಂದ ಅಭಿಮಾನಿಗಳು

Untitled-design-67-1
Published on

ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 AD'. ನಿರೀಕ್ಷೆಯಂತೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್​​ನಲ್ಲಿ ತಯಾರಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಅದ್ಭುತವಾಗಿ ಮೂಡಿಬಂದಿದೆ. ಸರಿಸುಮಾರು 2 ನಿಮಿಷ 55 ಸೆಕೆಂಡುಗಳಿರುವ ಟ್ರೇಲರನ್ನು​​ ಬಿಡುಗಡೆಯಾದ 45 ನಿಮಿಷದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಟ್ರೇಲರ್​ನಲ್ಲಿ ಸಿನಿಮಾದ ಪಂಚ್​ ಡೈಲಾಗ್​​​​​​, ಫೈಟ್ಸ್​​​ ನೋಡಿ ಅಭಿಮಾನಿಗಳು ದಶಕದ ಟ್ರೈಲರ್ ಎಂದು ಹೇಳುತ್ತಿದ್ದಾರೆ. ಸಿನಿಮಾದ ಟ್ರೇಲರ್​​ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಒಂದು ವಿಜ್ಞಾನದ ಆಧಾರದ ಮೇಲೆ ಮತ್ತು ಇನ್ನೊಂದು ಪುರಾಣಗಳ ಪ್ರಕಾರ. ಇಬ್ಬರೂ ಭೇಟಿಯಾದಾಗ 'ಕಲ್ಕಿ 2898 ಕ್ರಿ.ಶ' ರಚನೆಯಾಗುತ್ತದೆ ಎಂಬುದು ಅರ್ಥವಾಗುತ್ತದೆ. ಕಲ್ಕಿ 2898 AD ನಿಜವಾಗಿಯೂ ನಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ.

ರೆಕಾರ್ಡ್​​ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್ ಸೋತಿಲ್ಲ ಎಂದು ಪ್ರಭಾಸ್ ಹೇಳುವ ಡೈಲಾಗ್ ಟ್ರೇಲರ್​​ನ ಹೈಲೈಟ್ ಆಗಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಈ ಸಿನಿಮಾ ಕಾಲ್ಪನಿಕ ಕಥೆಯ ಜತೆಗೆ ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯವನ್ನು ಚಿತ್ರಿಸುತ್ತದೆ. ಯುಗವು ಯಾವುದೇ ಆಗಿರಲಿ, ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆದ್ದಿದೆ ಎಂದು ಚಿತ್ರ ತೋರಿಸುತ್ತದೆ.

ಚಿತ್ರದಲ್ಲಿ ಪ್ರಭಾಸ್ ಭೈರವನಾಗಿ, ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಕೂಡ ಅದ್ಭುತವಾದ ಆಕ್ಷನ್ ಅನ್ನು ಮಾಡಿರುವುದು ಟ್ರೇಲರ್​ನಿಂದ ತಿಳಿಯುತ್ತದೆ. ಅತಿಥಿ ಪಾತ್ರ ಮತ್ತು ಖಳನಾಯಕನ ಪಾತ್ರವನ್ನು ನಿರ್ವಹಿಸಿರುವ ಉಲಗನಾಯಗನ್ ಕಮಲ್ ಹಾಸನ್ ಟ್ರೇಲರ್​​ನ ಕೊನೆಯಲ್ಲಿ ಭಯ ಪಡಬೇಡಿ ಇನ್ನೊಂದು ಲೋಕ ಬರುತ್ತಿದೆ ಎಂಬ ಡೈಲಾಗ್ ಹೇಳುವ ಮೂಲಕ ಗುರುತಿಸಲಾಗದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕಾಗಿ ಅಮಿತಾಬ್ ಬಚ್ಚನ್, ದೀಪಿಕಾ, ಕಮಲ್ ಹಾಸನ್ ತಾವೇ ತೆಲುಗಿಗೆ ಡಬ್ ಮಾಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಜೂನ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್​ ಆಗಿರುವ ಟೀಸರ್ ಹಾಗೂ ಪೋಸ್ಟರ್​​ಗಳಿಂದಲೇ ಸಿನಿಮಾ ಸಂಚಲನ ಮೂಡಿಸಿದ್ದು, ಟ್ರೇಲರ್​ ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸಿನಿಮಾ ಬಿಡುಗಡೆಯಾದ ನಂತರ ಇನ್ನೆಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡುತ್ತದೇ ಎಂಬುದುನ್ನು ನೋಡಬೇಕಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net