'ಇಂತಹ ಸಿನಿಮಾ ಇಲ್ಲಿಯವರೆಗೆ ಭಾರತೀಯ ಚಿತ್ರರಂಗದಲ್ಲಿ ಬಂದೇ ಇಲ್ಲ'! ಯಾರ ಚಿತ್ರವಿದು?

Untitled design - 2024-02-24T172704.460
Published on

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್ ಸ್ಟಾರ್​ ಪ್ರಭಾಸ್​ ಹಾಗೂ ನಿರ್ದೇಶಕ ನಾಗ್ ಅಶ್ವಿನ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಸೈನ್ಸ್​-ಫಿಕ್ಷನ್ ಆಧರಿತ ಪ್ಯಾನ್ ಇಂಡಿಯಾ 'ಕಲ್ಕಿ 2898 AD' ಸಿನಿಮಾ ಸದ್ಯ ಬಿಡುಗಡೆಗೂ ಮುನ್ನ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಚಿತ್ರ ಮೇ 09, 2024ರಂದು ತೆರೆಗೆ ಬರಲು ಸಜ್ಜಾಗಿದೆ.

ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಚಿತ್ರವು ಭಾರತೀಯ ಪುರಾಣಗಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ ಎಂಬ ಊಹಾಪೋಹಗಳು ಹರಿದಾಡಿವೆ. ಇದೆಲ್ಲದರ ನಡುವೆ ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿತ್ರದ ಡೈಲಾಗ್ ರೈಟರ್​ ಆದ ಸಾಯಿ ಮಾಧವ್ ಬುರ್ರಾ ಮಾತನಾಡಿ, "ಕಲ್ಕಿ 2898 AD' ಸಿನಿಮಾವು ಇಲ್ಲಿಯವರೆಗೆ ಟಾಲಿವುಡ್‌ನಲ್ಲಿ ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲಿ ಬಂದಿಲ್ಲ. ಭಾರತೀಯ ಚಿತ್ರರಂಗದಲ್ಲಿ ಚಿತ್ರದ ಪ್ರಕಾರವನ್ನು ಹಿಂದೆಂದೂ ಅನ್ವೇಷಿಸಲಾಗಿಲ್ಲ" ಎಂದು ಹೇಳಿದ್ದಾರೆ.

"ಇದು ನೆಕ್ಟ್​​ ಲೆವೆಲ್​ ಸಿನಿಮಾ. ಹಾಲಿವುಡ್ ಸಿನಿಮಾ ನೋಡಿದ ಅನುಭವವಾಗುತ್ತೆ. ತೆಲುಗು ಅಥವಾ ಭಾರತೀಯ ಸಿನಿಮಾ ನೋಡುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲ. 'RC15' ಕೂಡ ಇದೇ ರೀತಿಯ ಒಂದು ದೊಡ್ಡ ಯೋಜನೆಯಾಗಿದೆ. ಇಂತಹ ಒಳ್ಳೆಯ ಪ್ರಾಜೆಕ್ಟ್​ಗಳ ಭಾಗವಾಗಿದ್ದೇನೆ ಎಂದು ನನಗೆ ಬಹಳ ಖುಷಿಯಿದೆ" ಎಂದು ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net