

ಚಾಮರಾಜನಗರ: ಕೊತ-ಕೊತ ಕುದಿಯುವ ಎಣ್ಣೆಯಿಂದ ಬರಿಗೈಲ್ಲಿ ಅರ್ಚಕರೊಬ್ಬರು ಕಜ್ಜಾಯ ತೆಗೆದಿದ್ದು, ಭಕ್ತರು ಉಬ್ಬೇರಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ನಡೆದ ಸಿದ್ದಪ್ಪಾಜೀ ಜಾತ್ರೆಯಲ್ಲಿ ಸುಮಾರು 2 ಗಂಟೆ ಕಾಲ ಕಾದ ಎಣ್ಣೆಗೆ ಭಕ್ತರು ಕಜ್ಜಾಯ ಹಾಕುತ್ತಿದ್ದರು. ಬೆಂದ ಕಜ್ಜಾಯವನ್ನು ಕುದಿಯುವ ಎಣ್ಣೆಯಿಂದ ಬರಿಗೈಲಿ ಅರ್ಚಕ ಸಿದ್ದರಾಜು ತೆಗೆದರು.
ಸಾವಿರಾರು ಜನರ ಸಮ್ಮುಖದಲ್ಲಿ ಕುದಿಯುವ ಎಣ್ಣೆಗೆ ಅರ್ಚಕರು ಕೈ ಹಾಕಿ ಕಜ್ಜಾಯ ತೆಗೆಯುವ ದೃಶ್ಯ ವೈರಲ್ ಆಗಿದೆ. ಪ್ರತಿ ವರ್ಷ ಕಡೇ ಕಾರ್ತಿಕ ಸೋಮವಾರ ಇಲ್ಲಿ ಜಾತ್ರೆ ನಡೆಯುತ್ತಿದೆ. ಕಾದ ಎಣ್ಣೆಗೆ ಕೈ ಹಾಕಿದರೂ ಸುಡುವುದಿಲ್ಲ. ಇದು ಸಿದ್ದಪ್ಪಾಜೀ ಕ್ಷೇತ್ರದ ಮಹಿಮೆ.