ಕೈಲಾಸ ಮಾನಸ ಸರೋವರ ಯಾತ್ರೆ ಶುರು

bj
Published on

ಗ್ಯಾಂಗ್ಟಾಕ್: ಹಲವು ವರ್ಷಗಳ ಬಳಿಕ ಪುನರಾರಂಭಗೊಂಡಿರುವ ಕೈಲಾಸ ಮಾನಸ ಸರೋವರ ಯಾತ್ರೆಗೆ ಭಾರತೀಯ ಯಾತ್ರಿಕರು ತೆರಳುತ್ತಿದ್ದು, ಶುಕ್ರವಾರ 33 ಯಾತ್ರಿಕರ ಮೊದಲ ತಂಡ ಸಿಕ್ಕಿಂನಿಂದ ತೆರಳಿದೆ.

ಸಿಕ್ಕಿಂನ ನಾಥುಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಮೊದಲ ತಂಡಕ್ಕೆ ಚಾಲನೆ ನೀಡಿದರು. ಮೊದಲ ತಂಡದಲ್ಲಿ 33 ಯಾತ್ರಿಕರು ಮತ್ತು ವಿದೇಶಾಂಗ ಸಚಿವಾಲಯ ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್​ನ ಇಬ್ಬರು ಅಧಿಕಾರಿಗಳಿದ್ದಾರೆ.

ಈ ವರ್ಷ 750 ಜನರು ಯಾತ್ರೆ ಕೈಗೊಳ್ಳಲಿದ್ದು, 500 ಮಂದಿ 10 ತಂಡಗಳಲ್ಲಿ ಉತ್ತರಾಖಂಡದ ನಾಥುನಾ ಮಾರ್ಗದ ಮೂಲಕ ಹಾಗೂ ಉಳಿದ 250 ಜನರು ಲಿಪುಲೇಖ್ ಪಾಸ್ ಮೂಲಕ ಟಿಬೆಟ್​ಗೆ ತೆರಳಲಿದ್ದಾರೆ.

ಚೀನಾ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ 2020ರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ರದ್ದುಗೊಳಿಸಿತ್ತು. ಭಾರತ ಮತ್ತು ಚೀನಾ ಸರ್ಕಾರಗಳು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ ಬಳಿಕ ಈ ವರ್ಷದಿಂದ ಯಾತ್ರೆ ಆರಂಭಿಸಲು ಚೀನಾ ಸಮ್ಮತಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net