

ಕೋಲಾರ: ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪೂರಕ ವಾತಾವರಣ ಇದೆ. ಆದರೆ ಶಾಸಕರು ಪಕ್ಷದ ಪದಾಧಿಕಾರಿಗಳನ್ನು ಗುಲಾಮರಂತೆ ಕಾಣುತ್ತಿದ್ದು, ಇದು ಗೆಲುವಿನ ಮೇಲೆ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರು ಚುನಾವಣೆಗಳಲ್ಲಿ ದುಡಿದು ಯಶಸ್ವಿಯಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಆಗುತ್ತಿಲ್ಲ ಎಂದರು.
ವೇಮಗಲ್&ಕುರುಗಲ್ ಪಟ್ಟಣ ಪಂಚಾಯಿತಿ ವಿಚಾರವಾಗಿ ಶಾಸಕರಿಗೆ ಕರೆ ಮಾಡಿದಾಗ, ಅವರು ಗುಲಾಮರಂತೆ ಮಾತನಾಡಿಸಿದರು. ಇದು ಜಿಲ್ಲಾಧ್ಯಕ್ಷರೊಂದಿಗೆ ವರ್ತಿಸಿಕೊಂಡ ತೀರಿಯೇ ಎಂದು ಕಿಡಿಕಾರಿದರು.
ಜಿಲ್ಲಾ ಕಾಂಗ್ರೆಸ್ ಟಕದಲ್ಲಿ ಹಳೇ ಕಾರ್ಯಕರ್ತರಿದ್ದಾರೆ, ಪ್ರಧಾನ ಕಾರ್ಯದರ್ಶಿ, ಕಾರ್ಯಾಧ್ಯಕ್ಷ, ಕಾರ್ಯದರ್ಶಿ, ಬ್ಲಾಕ್ ಕಾಂಗ್ರೆಸ್ ಸೇರಿ ವಿವಿಧ ಟಕಗಳಲ್ಲಿ ಪದಾಧಿಕಾರಿಗಳು ದುಡಿಯುತ್ತಿದ್ದಾರೆ. ಅವರಿಗೆ ಪಕ್ಷ ಅಥವಾ ನಾಮನಿಗಳಲ್ಲಿ ಸ್ಥಾನಮಾನ ಕಲ್ಪಿಸಲು ಶಾಸಕರು ಸ್ಪಂದಿಸುತ್ತಿಲ್ಲ, ನಮ್ಮಷ್ಟಕ್ಕೆ ನಾವೇ ಮಾಡಿಕೊಳ್ತಿವಿ ಅಂದರೂ ಸಹಕರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಚೆಗೆ ರಾಜ್ಯಮಟ್ಟದ ಸಭೆಯಲ್ಲಿ ಭಾಗವಹಿಸಿದ್ದಾಗ ಅಲ್ಲಿ ಕೋಲಾರ ಅಂದ ತಕ್ಷಣ ಗಲಾಟೆ, ಪರಸ್ಪರ ಸಂರ್ಷ, ಗುಂಪು ವಿಭಾಗದಲ್ಲಿ ಕೆಲಸ ಮಾಡೊದೆ ಕಷ್ಟ. ಎಂಬುದು ರಾಜ್ಯ ಪದಾಧಿಕಾರಿಗಳಲ್ಲಿ ಭಾವನೆಯಿದೆ. ಕಮಿಟಿಗಳಲ್ಲಿ ಕೆಲಸ ಮಾಡುವುದು ಕಷ್ಟ ಎಂದರು.
ಹಿಂದೆ ಚಂದ್ರಾರೆಡ್ಡಿ ಅವರು ಅಧ್ಯಕ್ಷರಾಗಿದ್ದು, ಸರ್ಕಾರ ರಚನೆ ಆಗುವ ಸಮಯಕ್ಕೆ ಪಕ್ಷ ಬಿಟ್ಟು ಹೋಗಲು ನಮ್ಮ ಜನಪ್ರತಿನಿಧಿಗಳೇ ಕಾರಣರಾದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಗಜತ್ ಇತಿಹಾಸ ಇರುವ ಪಕ್ಷಕ್ಕೆ ಸಾಕಷ್ಟು ಮಂದಿ ತ್ಯಾಗ ಬಲಿದಾನ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಸಾಮಾಜಿಕ ತಾಣ ಉಪಯೋಗಿಸಿಕೊಂಡು ಸುಳ್ಳು ಹೇಳಿ ಜನರ ವಿಶ್ವಾಸಗಳಿಸುತ್ತಿದ್ದಾರೆ, ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮೋದಿ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ. ಈ ವಿಚಾರವನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಪಕ್ಷ ಕೆಲಸ ಮಾಡುತ್ತಿಲ್ಲ, ಇದಕ್ಕೆಲ್ಲ ಪ್ರಚಾರ ಕೊರತೆ ಕಾರಣ ಎಂದು ಅಸಮಾಧಾನ ಹೊರ ಹಾಕಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ರಾಹುಲ್ ಗಾಂಧಿ ಸೇರಿ ಅನೇಕ ನಾಯಕರು ದೇಶ ಕಟ್ಟಲು ಶ್ರಮಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಚಾರ ಸಮಿತಿ ಸಕ್ರಿಯಗೊಳಿಸಬೇಕು. ಜತೆಗೆ ಸೂಕ್ತ ವ್ಯಕ್ತಿಯನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ಘೋಷಿಸಬೇಕು ಎಂದು ಕೋರಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಮಾವು ಮಾರುಕಟ್ಟೆ ಹಾಗೂ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ, ಎಸ್ಸಿ ಟಕದ ಕೆ.ಜಯದೇವ್, ಮುಖಂಡ ಖಲೀಂವುಲ್ಲಾ ಉಪಸ್ಥಿತರಿದ್ದರು.
* ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿ
ಸ್ಥಳಿಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ, ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮನ್ವಯ ಸಮಿತಿ ಸದಸ್ಯ ದಾನಿಶ್ ತಿಳಿಸಿದರು. ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಬಡವರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ. ಆದ್ದರಿಂದ ಜನರ ವಿಶ್ವಾಸ ಪಕ್ಷದ ಮೇಲಿದೆ. ಇದು ಅಭ್ಯರ್ಥಿಗಳ ಗೆಲುವಿನ ಸೂಚನೆಯಾಗಿದೆ. ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು, ವಿವಿಧ ಟಕಗಳ ಪದಾಧಿಕಾರಿಗಳು ಎಲ್ಲರೂ ಕಾಂಗ್ರೆಸ್ ಕುಟುಂಬದವರೆ. ಏನೇ ಅಭಿನ್ನಾಭಿಪ್ರಾಯಗಳು ಇದ್ದರೆ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಬಹಿರಂಗವಾಗಿ ಪ್ರದರ್ಶಿಸಿಕೊಳ್ಳುವುದು ಸರಿಯಲ್ಲ. ಇದು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.