ಸಂಪೂರ್ಣ ನೇಜಿ ನಾಶ ಮಾಡಿದ ಕಾಡುಕೋಣ

manavi
ನಾಲ್ಕೂರು ಗ್ರಾಪಂ ಅಧ್ಯಕ್ಷೆ ಪ್ರತಿಮಾ ರವಿಚಂದ್ರ ಆಚಾರ್ ರೈತರ ಮನವಿ ಸ್ವೀಕರಿಸಿದರು
Published on

ಕೊಕ್ಕರ್ಣೆ: ನಾಲ್ಕೂರು ಗ್ರಾಮದ ಮಾರಾಳಿ, ಹೇರಿಗದ್ದೆ, ಮೆಕ್ಕೆಮನೆಯ ರೈತರಾದ ರಾಜೀವ ಶೆಟ್ಟಿ, ಕಾಡ್ತಿ ಹಾಂಡ, ಕೃಷ್ಣ, ಗುಲಾಬಿ, ರತ್ನಾ, ಪಾರ್ವತಿ, ರುಕ್ಮಿಣಿ, ಸೀತಾ, ಚಂದ್ರಶೇಖರ, ಪುರುಷ, ರಾಮ, ಅಂಬ್ರು ಅವರ ಗದ್ದೆಗೆ ನಾಟಿ ಮಾಡಲು ಸಿದ್ಧವಾಗಿದ್ದ ನೇಜಿಯನ್ನು ಕಾಡುಕೋಣಗಳು ಶುಕ್ರವಾರ ಸಂಪೂರ್ಣ ನಾಶ ಮಾಡಿವೆ.

ಶುಕ್ರವಾರ ಗದ್ದೆಯಲ್ಲಿ ತಡರಾತ್ರಿ 2 ಗಂಟೆವರೆಗೂ ಕಾವಲಿದ್ದರು. ಬಳಿಕ ಕಾಡುಕೊಣಗಳ ಹಿಂಡು ಗದ್ದೆಗೆ ದಾಳಿ ಮಾಡಿ ಸಂಪೂರ್ಣ ನೇಜಿ ನಾಶಪಡಿಸಿವೆ. ಮಾತ್ರವಲ್ಲದೆ ರೈತರು ಕಾಡಿಗೆ ಅಟ್ಟಲು ಪ್ರಯತ್ನಿಸಿದ ಸಂದರ್ಭ ಅವರ ಮೇಲೆಯೂ ದಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಸ್ಥಳೀಯ ಗ್ರಾಪಂಗೆ ತೆರಳಿ ಮನವಿ ನೀಡುವುದರ ಮೂಲಕ ಇಲಾಖೆಗಳಿಗೆ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು ಮತ್ತು ಶಾಶ್ವತ ಪರಿಹಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net