

ಮೈಸೂರು: ಕೃತಿ ಚೌರ್ಯ ಪಿಡುಗಾದ ವಿಭಿನ್ನ ಚಿತ್ರಕತೆ ಹೊಂದಿರುವ ‘ಕದ್ದ ಚಿತ್ರ’ ಶೀರ್ಷಿಕೆಯ ಚಲನಚಿತ್ರ ಶೀಘ್ರದಲ್ಲೇ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಸುಹಾಸ್ ಕೃಷ್ಣ ಹೇಳಿದರು.
ಚಿತ್ರದಲ್ಲಿ ವಿಜಯ ರಾಘವೇಂದ್ರ ನಾಯಕ ನಟನಾಗಿ ಅಭಿನಯಿಸಿದ್ದು, ಖ್ಯಾತ ಕಾದಂಬರಿಕಾರನ ಪಾತ್ರ ನಿರ್ವಹಿಸಿದ್ದಾರೆ. ಅವರ ಕೃತಿಯೊಂದರ ಕೃತಿಚೌರ್ಯ ಬಳಿಕ ನಡೆಯುವ ಕುತೂಹಲಕಾರಿ ಘಟನೆಗಳನ್ನು ಚಲನಚಿತ್ರ ಹೊಂದಿದೆ. ಇದೊಂದು ವಿಭಿನ್ನ ಕಥಾಹಂದರದ ಚಲನಚಿತ್ರವಾಗಿದ್ದು, ಬೆಂಗಳೂರು ಹಾಗೂ ಕೇರಳದ ವೈನಾಡುಗಳಲ್ಲಿ ಚಿತ್ರೀಕರಿಸಲಾಗಿದೆ. ರಾಜ್ಯಾದ್ಯಂತ 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರಾದ ನಮ್ರತಾ ಸುರೇಂದ್ರನಾಥ್, ಕೃಷ್ಣರಾಜ್, ರಾಘು ಶಿವಮೊಗ್ಗ ಇದ್ದರು.