ಕಬಡ್ಡಿ ಆಟ ಮುಗಿಸಿ ಬರುತ್ತಿರುವಾಗ ಅಪಘಾತದಲ್ಲಿ ಮೃತಪಟ್ಟ ಆಟಗಾರ

Kabaddi Player
Published on

ಮುಗಳಖೋಡ: ಅಪಘಾತದಲ್ಲಿ ಕಬಡ್ಡಿ ಪಟು ಮೃತಪಟ್ಟ ದುರ್ಘಟನೆ ರಾಯಭಾಗ ತಾಲೂಕಿನ ನಿಪ್ಪನಾಳ ಗ್ರಾಮದ ಬಳಿ ನಡೆದಿದೆ. ಕಾಂತೇಶ ಮಲ್ಲಪ್ಪ ಬಳಿಗಾರ (19) ಮೃತ ಯುವಕ.

ಕಾಂತೇಶ್​ ಮುಗಳಖೋಡ ನಿವಾಸಿಯಾಗಿದ್ದು ವಿಜಯದಶಮಿ ನಿಮಿತ್ತ ನಿಪ್ಪನಾಳದಲ್ಲಿ ಹಮ್ಮಿಕೊಂಡಿದ್ದ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆಟ ಮುಗಿಸಿ ಅಲ್ಲಿಂದ ವಾಪಸ್​ ಬರುವಾಗ ಕಂಕಣವಾಡಿ-ಗರ್ಲಾಪುರ ರಸ್ತೆ ಮಧ್ಯೆ ಅಪಘಾತ ಸಂಭವಿಸಿದೆ. ರಾಯಭಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net