

ಬೆಂಗಳೂರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ಮೊದಲ ಬಾರಿಗೆ ನಡೆಸುತ್ತಿದ್ದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸೆ.10ರಿಂದ ಆರಂಭವಾಗಲಿದೆ.
ಸೆ.5ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅದೇ ದಿನ ಮಾಹಿತಿ ಪುಸ್ತಕ ಕೂಡ ಪ್ರಕಟಿಸಲಾಗುತ್ತದೆ. ಸೆ.30ರ ವರೆಗೂ ಅರ್ಜಿ ಅಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಅರ್ಜಿ ಶುಲ್ಕ ಪಾವತಿಸಲು ಅ.3 ಕೊನೆಯ ದಿನ. ನ.5ರಂದು ಲಿಖಿತ ಪರೀಕ್ಷೆ ಇರುತ್ತದೆ. ವಿಜ್ಞಾನ, ಮಾನವಿಕ ವಿಭಾಗಗಳ ಒಟ್ಟು 41 ವಿಷಯಗಳ ಅರ್ಹರಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.