ಬೆಂಗಳೂರು: ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ -24(ಕೆಸೆಟ್) ಪರೀಕ್ಷೆಯನ್ನು ನ.24ರಂದು ನಡೆಸುವುದಾಗಿ ಕೆಇಎ ವೇಳಾಪಟ್ಟಿ ಪ್ರಕಟಿಸಿದೆ..ಜುಲೈ 22ರಿಂದ ಆಗಸ್ಟ್ 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 26 ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನವಾಗಿದೆ. ನ.24ರಂದು ಪರೀಕ್ಷೆ ನಡೆಸಲಾಗುತ್ತದೆ.