

ತುಮಕೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹುಷಾರಿಲ್ಲ, ಅವರ ಕಾಲಿಗೆ ಪೆಟ್ಟಾಗಿದ್ದು ಸಣ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅದಕ್ಕಾಗಿ ಆರೋಗ್ಯ ವಿಚಾರಿಸಲು ಬಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಕ್ಯಾತಸಂದ್ರದ ರಾಜಣ್ಣ ನಿವಾಸಕ್ಕೆ ಶನಿವಾರ ಪರಂ ಭೇಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ಸುದ್ದಿಗಾರರಿಗೆ ಈ ಭೇಟಿಗೆ ರಾಜಕೀಯ ವಿಶೇಷತೆ ಎನು ಇಲ್ಲ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಈ ಸಂದರ್ಭದಲ್ಲಿ ಡಿಸಿಎಂ ವಿಷಯವನ್ನು ನಾವಿಬ್ಬರು ಚರ್ಚೆ ಮಾಡಿದರೆ ಏನ್ ಆಗುತ್ತೆ. ಚರ್ಚೆ ದೆಹಲಿಯಲ್ಲಿ ಆಗಬೇಕು ಎಂದರು.
ಇತ್ತೀಚೆಗೆ ಮೂವರು ಡಿಸಿಎಂ ಹುದ್ದೆ ಸೃಷ್ಟಿಸುವ ಅಗತ್ಯತೆ ಬಗ್ಗೆ ರಾಜಣ್ಣ ಧ್ವನಿ ಎತ್ತಿದ್ದರು. ಹಾಗಾಗಿ, ರಾಜಣ್ಣ-ಪರಂ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ.