

ಬಾಳೆಹೊನ್ನೂರು: ಸಾಹಿತಿ ಕೆ.ಎನ್.ಭಟ್ ಶಿರಾಡಿಪಾಲ್‌ರವರು ಮೂರನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದರೂ ಸ್ವಂತ ಪರಿಶ್ರಮದಿಂದ ಕನ್ನಡ ವಿದ್ವಾನ್, ಹಿಂದಿ ಭಾಷಾ ವಿಶಾರದಾ ಹಾಗೂ ಹಿಂದಿ ರತ್ನ ಪದವಿ ಪಡೆದು ಕನ್ನಡ ಸಾಹಿತ್ಯ ಕ್ಷೇತ್ರದ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಪರಿಸರವಾದಿ ಗಜೇಂದ್ರ ಗೊರಸುಕುಡಿಗೆ ಹೇಳಿದರು.
ಪಟ್ಟಣದ ಸಿ.ಕೆ.ಪ್ರಕಾಶ್ ಅವರ ಮನೆಯಂಗಳದಲ್ಲಿ ಕೆ.ಎನ್.ಭಟ್ ಶಿರಾಡಿಪಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಶತನಮನ ಶತಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡತನದ ಹಿನ್ನೆಲೆಯಿಂದ ಬದುಕಿನ ಹೋರಾಟದಲ್ಲಿ ಹೋಟೆಲ್ ಮಾಣಿ, ಬಸ್ ಕಂಡಕ್ಟರ್, ಟೈಲರ್, ಅಡುಗೆ ಸಹಾಯಕ, ಪಾಕಶಾಸ ತಜ್ಞರಾಗಿ ಆರಂಭಗೊಂಡ ಇವರ ಜೀವನ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪದ ಶಿರಾಡಿಪಾಲ್ ಎಂಬಲ್ಲಿ ನೆಲೆನಿಂತು ಅಧ್ಯಾಪಕರಾಗಿ, ಕೊನೆಗೆ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ನಿವೃತ್ತಿಯಾಗಿದ್ದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಹತ್ತಾರು ಕ್ಷೇತ್ರದಲ್ಲಿ ಸಾಧನೆಗೈದ ಶಿರಾಡಿಪಾಲರು ಗರಡಿಮನೆ ಪೈಲ್ವಾನ್, ಉತ್ತಮ ೋಟೋಗ್ರಾರ್, ಸಂಗೀತ ಶಿಕ್ಷಕ, ಯಕ್ಷಗಾನದ ಅರ್ಥಗಾರಿಕೆಯಲ್ಲೂ ಪ್ರಾವಿಣ್ಯತೆ ಪಡೆದಿದ್ದರು. ಹರಿಕಥೆ ವಿದ್ವಾಂಸರಾಗಿ ನಾಡಿನಾದ್ಯಂತ ಸುಮಾರು 250ಕ್ಕೂ ಹೆಚ್ಚು ಹರಿಕಥಾ ಕಾಲಕ್ಷೇಪ ನಡೆಸಿಕೊಟ್ಟಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಗದ್ಯ-ಪದ್ಯ ಎರಡರಲ್ಲೂ ಸೈ ಎನ್ನಿಸಿಕೊಂಡ ಬಹುಮುಖ ಪ್ರತಿಭಾ ಸಂಪನ್ನರಾಗಿದ್ದಾರೆ. ಶಿರಾಡಿಪಾಲ್ ಅವರ ಜನ್ಮ ಶತಮಾನೋತ್ಸವ ವರ್ಷದ ನೆನಪಿಗಾಗಿ ರಾಜ್ಯಾದ್ಯಂತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನೂರು ಜನರನ್ನು ಸನ್ಮಾನಿಸಲಾಗುವುದು ಎಂದರು.
ಬಾಳೆಹೊನ್ನೂರಿನಲ್ಲಿ ಚುಟುಕು ಸಾಹಿತ್ಯ, ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಯಜ್ಞಪುರುಷಭಟ್ ಹಾಗೂ ಪಾಕಶಾಸ ತಜ್ಞ ಸಿ.ಕೆ.ಪ್ರಕಾಶ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಪತ್ರಕರ್ತ ಯಜ್ಞಪುರುಷ ಭಟ್ ಮಾತನಾಡಿ, ಪತ್ರಿಕಾ ರಂಗದಲ್ಲಿ ಸೇವೆ ಮಾಡುವುದು ಬಹಳ ಗಂಭೀರ ವಿಷಯ. ಗ್ರಾಮದ ಸಮಸ್ಯೆಯನ್ನು ಉಲ್ಲೇಖಿಸಿ ವರದಿ ಮಾಡುವುದು ರಾಜಕೀಯ ಮುಖಂಡರ ಹಾಗೂ ಹಿರಿಯ ಅಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತದೆ ಎಂದರು.
ಪ್ರಮುಖರಾದ ಪ್ರಸನ್ನಾ ಜಿ.ಭಟ್, ಸಿ.ಕೆ.ಪ್ರಕಾಶ್, ಸವಿತಾ, ವೆಂಕಟೇಶ್, ನಾಗರತ್ನಾ, ಗುರುಪ್ರಸಾದ್, ನಿವೇದಿತಾ, ಎಚ್.ಕೆ.ಸುಧಾಕರ ಭಟ್ ಇತರರಿದ್ದರು.