164 ದಿನಗಳ ಬಳಿಕ ಜೈಲಿನಿಂದ ಮುಕ್ತಿ! BRS ನಾಯಕಿ ಕವಿತಾಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್​

ವಿಜಯವಾಣಿ (34)
Published on

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ ಜೈಲುಪಾಲಾಗಿದ್ದ ಬಿಆರ್​ಎಸ್​ ನಾಯಕಿ ಕೆ. ಕವಿತಾಗೆ ಇದೀಗ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ ಕೋರ್ಟ್​, ಕವಿತಾಗೆ ಜೈಲಿನಿಂದ ಮುಕ್ತಿ ಕೊಟ್ಟಿದೆ.

ಈ ವರ್ಷದ ಮಾರ್ಚ್​​ನಲ್ಲಿ ಕವಿತಾರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಡಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು. ತದನಂತರ ಬಿಆರ್​ಎಸ್​ ನಾಯಕಿಯನ್ನು ಅರೆಸ್ಟ್​ ಮಾಡಿದ ಸಿಬಿಐ ತಂಡ, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತು.

ಮದ್ಯ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೆಸರು ಕೂಡ ಕೇಳಿಬಂದಿತ್ತು. ಇದೇ ಪ್ರಕರಣದಡಿ ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿದ್ದ ಮನೀಶ್​ಗೆ ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡುವ ಮೂಲಕ ಸೆರೆಮನೆ ವಾಸದಿಂದ ಮುಕ್ತಿ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net