25 ವರ್ಷದಲ್ಲಿ 4500 ವಂದೇ ಭಾರತ್​ ರೈಲು!

Vande Bharat
Published on

ನವದೆಹಲಿ: ಭಾರತೀಯ ರೈಲ್ವೇ ವ್ಯವಸ್ಥೆ ವಿಶ್ವದಲ್ಲೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ದೇಶದಲ್ಲಿ ಪ್ರಸ್ತುತ 23 ವಂದೇ ಭಾರತ್​ ರೈಲುಗಳು ಸಂಚರಿಸುತ್ತಿದ್ದು, 2047ರ ವೇಳೆಗೆ 4,500 ವಂದೇ ಭಾರತ್​ ರೈಲುಗಳನ್ನು ಓಡಿಸುವುದು ನಮ್ಮ ಉದ್ದೇಶ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಭಾರತವು ತನ್ನ ಮೊದಲ ಹೈಸ್ಪೀಡ್​ ಬುಲೆಟ್​ ರೈಲು ಹೊಂದಲಿದೆ. ವಂದೇ ಭಾರತ್​ ಎಕ್ಸ್​ಪ್ರೆಸ್​ ಮತ್ತು ಬುಲೆಟ್​ ರೈಲುಗಳ ಹೊರತಾಗಿ, ಮುಂಬರುವ ವರ್ಷಗಳಲ್ಲಿ ರೈಲುಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

ಮೊದಲು ದೇಶದಲ್ಲಿ ದೂರದೃಷ್ಟಿ ಮತ್ತು ನಾಯಕತ್ವದ ಕೊರತೆ ಇತ್ತು. 2014ರಲ್ಲಿ ಹೊಸ ಹಂತ ಪ್ರಾರಂಭವಾಯಿತು. 10 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚದ ಯೋಜನೆ ಜಾರಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net