More

    ರಾಮಮಂದಿರ ಪ್ರತಿಷ್ಠಾಪನೆ ಪಂಡಿತ್​ ಲಕ್ಷ್ಮೀಕಾಂತ ನೇತೃತ್ವ; ವೇದಪರಿಣತ 121 ವಿದ್ವಾಂಸರಿಂದ ಪ್ರತಿಷ್ಠಾಪನಾ ಕಾರ್ಯ

    ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮಮಂದಿರದಲ್ಲಿನ ಪ್ರತಿಷ್ಠಾಪನೆ ನೇತೃತ್ವವನ್ನು ಶಿವಾಜಿ ಪುರೋಹಿತರ ವಂಶಸ್ಥ, ವಾರಾಣಸಿಯ ವೈದಿಕ ಸಂಪ್ರದಾಯದ ವಿದ್ವಾಂಸ, 86 ವರ್ಷದ ಹಿರಿಯ ಪಂಡಿತ್​ ಲಕ್ಷ್ಮೀಕಾಂತ ಮಥುರನಾಥ ದೀತ್​ ವಹಿಸಲಿದ್ದಾರೆ. ಇವರು ಹದಿನೇಳನೇ ಶತಮಾನದಲ್ಲಿ ಕಾಶಿಯ ಪ್ರಸಿದ್ಧ ವಿದ್ವಾಂಸ, ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ ನೇತೃತ್ವ ವಹಿಸಿದ್ದ ಗಂಗಾಭಟ್ಟ ಅವರ ವಂಶಸ್ಥರು.

    ಅಯೋಧ್ಯೆಯ ರಾಮಮಂದಿರದಲ್ಲಿ 2024ರ ಜ. 22ರಂದು ನೆರವೇರಲಿರುವ ರಾಮ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಕಾರ್ಯದ ಮುಂದಾಳತ್ವವನ್ನು ಲಕ್ಷ್ಮೀಕಾಂತ ದೀತ್​ ವಹಿಸಲಿದ್ದಾರೆ. ಈ ಪ್ರತಿಷ್ಠಾಪನೆಯಲ್ಲಿ ದೇಶಾದ್ಯಂತದ ವಿವಿಧ ಭಾಗಗಳ ವೇದಪರಿಣತ 121 ವಿದ್ವಾಂಸರು ಭಾಗಿಯಾಗಲಿದ್ದು, ಆ ಪೈಕಿ ವಾರಾಣಸಿಯ 40ಕ್ಕೂ ಅಧಿಕ ವಿದ್ವಾಂಸರು ಇರಲಿದ್ದಾರೆ. ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಜ. 16ರಂದೇ ಕೆಲವೊಂದು ಪೂಜೆ ಆಚರಣೆಗಳು ಆರಂಭವಾಗಲಿವೆ. ಜ. 17ರಂದು ಜಲಯಾತ್ರೆ, ತೀರ್ಥ, ಕಲಶ ಪೂಜೆ, ಕಲಶಯಾತ್ರೆಗಳು ನಡೆಯಲಿವೆ. ಜ. 22ರ ಧಾರ್ಮಿಕ ವಿಧಿ&ವಿಧಾನಗಳಲ್ಲಿ ಲಕ್ಷಿ$್ಮಕಾಂತ ಮಥುರನಾಥ ದೀತ್​ ಪ್ರಮುಖ ಪಾತ್ರ ವಹಿಸಲಿದ್ದಾರೆ.

    ಪುರಾಣದ ಸಂತರು&ದಾರ್ಶನಿಕರು ನನಗೆ ನೀಡಿದ ಆಶೀರ್ವಾದದಿಂದ ಕಾಶಿ ಮತ್ತು ನನಗೆ ರಾಮ ಲಲ್ಲಾನ ಪ್ರತಿಷ್ಠಾಪನೆಯ ಮೇಲ್ವಿಚಾರಣೆ ಜವಾಬ್ದಾರಿ ಲಭಿಸಿದೆ. ಭಗವಾನ್​ ರಾಮನ ಆಶೀರ್ವಾದಗಳೊಂದಿಗೆ ನಾನು ನನ್ನ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ.
    -ಲಕ್ಷ್ಮೀಕಾಂತ ಮಥುರನಾಥ ದೀತ್​

    ಮೂರ್ತಿಗಳ ಕೆತ್ತನೆ ಶೇ. 90 ಪೂರ್ಣ

    ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶ್ರೀರಾಮ ಜನ್ಮಭೂಮಿ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಚಂಪತ್​ ರೈ ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂದಿರದ 3 ಕಡೆ ಶ್ರೀರಾಮನ ಮಗುವಿನ ರೂಪದ 4.3 ಅಡಿಯ ಮೂರು ಮೂರ್ತಿಗಳ ಕೆತ್ತನೆ ನಡೆಯುತ್ತಿದೆ. ಮೂವರು ಕಲಾವಿದರು ಮೂರು ಬೇರೆಬೇರೆ ಶಿಲ್ಪದಲ್ಲಿ ಅವುಗಳನ್ನು ತಯಾರು ಮಾಡುತ್ತಿದ್ದಾರೆ. ಆ ಪೈಕಿ ಒಂದನ್ನು ದೇವರ ಮೂರ್ತಿಯಾಗಿ ಪ್ರತಿಷ್ಠಾಪಿಸಲಾಗುವುದು. ಆ ಮೂರ್ತಿಗಳ ಕೆತ್ತನೆ ಕಾರ್ಯ ಶೇ. 90 ಪೂರ್ಣಗೊಂಡಿದೆ, ಇನ್ನೊಂದು ವಾರದಲ್ಲಿ ಮೂರ್ತಿಗಳು ಸಿದ್ಧವಾಗಲಿವೆ ಎಂದು ರೈ ತಿಳಿಸಿದ್ದಾರೆ. ಮೂರ್ತಿಯನ್ನು ನೆಲಮಹಡಿಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ನೆಲಮಹಡಿ ಬಹುತೇಕ ಪೂರ್ಣಗೊಂಡಿರುವುದರಿಂದ ಪ್ರತಿಷ್ಠಾಪನೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪ್ರತಿಷ್ಠಾಪನೆಗೆ ಕನಿಷ್ಠ 4 ಸಾವಿರ ಸಾಧುಗಳನ್ನು ಆಹ್ವಾನಿಸಲಾಗುವುದು. ಅಲ್ಲದೆ ಐವತ್ತು ದೇಶಗಳಿಂದ ಕನಿಷ್ಠ ಒಬ್ಬರನ್ನು ಪ್ರತಿನಿಧಿಯಾಗಿ ಆಹ್ವಾನಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts