ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥ ಕ್ಕೆ ಸೂಕ್ತ ಹೆಸರು ಸೂಚಿಸಿ.

gopal gowda
Published on

ಬೆಂಗಳೂರು: ರಾಜ್ಯದ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಲ್ಲಿ ಹುಟ್ಟಿಬೆಳೆದು ನ್ಯಾಯಾಂಗ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥ ಕ್ಕೆ ಸೂಕ್ತ ಹೆಸರು ಸೂಚಿಸುವಂತೆ ಅಭಿನಂದನಾ ಸಮಿತಿಯ ಸಂಚಾಲಕ ಎಂ.ಎನ್. ಪಿಳ್ಳಪ್ಪ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಜಸ್ಟೀಸ್ ವಿ. ಗೋಪಾಲಗೌಡರು 73 ವರ್ಷಗಳ ತುಂಬು ಜೀವನ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ 45 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಅವರ ಅಭಿಮಾನಿಗಳು, ಹಿರಿಯ ನ್ಯಾಯವಾದಿಗಳು, ಸಮಾಜದ ಮುಖಂಡರು ಅಭಿನಂದನಾ ಸಮಿತಿ ರಚಿಸಿದ್ದು, ಗ್ರಂಥ ರಚನೆ ಈಗಾಗಲೇ ಪ್ರಾರಂಭವಾಗಿದೆ. ವಿಶಿಷ್ಟವಾದ ಅಭಿನಂದನಾ ಗ್ರಂಥಕ್ಕೆ ಸೂಕ್ತ ಹೆಸರು ಸೂಚಿಸುವಂತೆ, ಹಿರಿಯರು, ಸಾಹಿತ್ಯಾಸಾಕ್ತರಲ್ಲಿ ಮನವಿ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥವನ್ನು ಬರಹಗಾರ ಡಾ. ನಂಜುಂಡಸ್ವಾಮಿ ಅವರ ಸಂಪಾದಕದಲ್ಲಿ ಬರಲಿದೆ. ಗ್ರಂಥ ಕನ್ನಡ, ಇಂಗ್ಲೀಷ್, ಹಿಂದಿ ಮೂರು ಭಾಷೆಗಳಲ್ಲಿ ಬರಲಿದೆ. ಕನ್ನಡ ಭಾಷೆಯಲ್ಲಿ ಬರೆದಿರುವ ಗ್ರಂಥ ಕರ್ನಾಟಕದಲ್ಲಿ ಬಿಡುಗಡೆಯಾಗಲಿದ್ದು,ಹಿಂದಿ ಭಾಷೆಯಲ್ಲಿ ಒರಿಸ್ಸಾ ರಾಜ್ಯ, ಇಂಗ್ಲೀಷ್ ಭಾಷೆಯಲ್ಲಿ ದೆಹಲಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಅಭಿನಂದನಾ ಗ್ರಂಥಕ್ಕೆ ಹೆಸರನ್ನು ಸೂಚಿಸಲು ಇಚ್ಚಿಸುವ ಸಾಹಿತ್ಯಾಸಕ್ತರು ಈ ವಿಳಾಸಕ್ಕೆ ಸೆ. 30ರ ಒಳಗಾಗಿ ಬರೆದು ತಿಳಿಸಬೇಕು. ನಂ.520, 8ನೇ ಮುಖ್ಯ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಸದಾಶಿವನಗರ, ಬೆಂಗಳೂರು 560080 . ವಾಟ್ಸ್‌ಆಪ್ ನಂಬರ್ ಮೂಲಕ 9945431926 ತಿಳಿಸಬಹುದು. ಗ್ರಂಥಕ್ಕೆ ಸೂಕ್ತ ಹೆಸರನ್ನು ಆಯ್ಕೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು. ವೀರಶೈವ ಸಂಘದ ಸದಸ್ಯ ಮೃತ್ಯುಂಜಯಸ್ವಾಮಿ, ವಕೀಲ ಶಿವಶಂಕರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net