

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಅವರು ಭಾನುವಾರ 80ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಜನ್ಮ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಸಿರಿಗೆರೆ ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಪಾಟೀಲರ ಬಾಲ್ಯ, ಶಿಕ್ಷಣ: ವಿರೂಪಣ್ಣ ಪಾಟೀಲ ಹಾಗೂ ಮಲ್ಲಮ್ಮ ದಂಪತಿ ಪುತ್ರನಾಗಿ 1940ರ ಜ.12ರಂದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಮಲಾಡಕಲ್ ಗ್ರಾಮದಲ್ಲಿ ಶಿವರಾಜ್ ಪಾಟೀಲ್ ಜನಿಸಿದರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು, ರಾಯಚೂರಿನ ಹಮ್ದರ್ದ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಕಲಬುರಗಿಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಸೇಠ್ ಶಂಕರ್ ಲಾಲ್ ಲಹೋತಿ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಶಿವರಾಜ್ ಪಾಟೀಲರು ಅನ್ನಪೂರ್ಣಮ್ಮ ಅವರನ್ನು ವಿವಾಹವಾಗಿದ್ದು, ಡಾ. ಶರಣ ಎಸ್. ಪಾಟೀಲ್, ಮಾಲತಿ ಬಿ. ಪಟೇಲ್ ಹಾಗೂ ಬಸವಪ್ರಭು ಎಸ್. ಪಾಟೀಲ್ ಇವರ ಮಕ್ಕಳು.
ವೃತ್ತಿ ಜೀವನ
ಪ್ರಮುಖ ತೀರ್ಪಗಳು
ಶಿವರಾಜ್ ಪಾಟೀಲ್ರ ಸರಳತೆ, ಮೃದು ಸ್ವಭಾವಕ್ಕೆ ಪ್ರತಿಯೊಬ್ಬರೂ ಆಕರ್ಷಿತರಾಗುತ್ತಾರೆ. ಸಾಮಾನ್ಯವಾಗಿ ಅಧಿಕಾರ ಎನ್ನುವುದು ಮನುಷ್ಯನ ಮೃದುತ್ವ ಕರಗಿಸಿ ಕಠೋರನನ್ನಾಗಿಸಿಬಿಡುತ್ತದೆ. ಆದರೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಂಥ ಉನ್ನತ ಹುದ್ದೆಯಲ್ಲಿದ್ದರೂ ಅವರು ಸರಳತೆಯನ್ನು ಬಿಡಲಿಲ್ಲ. ಕಲಬುರಗಿ, ಯಾದಗಿರಿಯಲ್ಲಿ ಅವರ ಹೆಸರಿನಲ್ಲೇ ಪಿಯು ಕಾಲೇಜುಗಳಿವೆ. ಆ ಎರಡೂ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಅಟೆಂಡರ್ನಿಂದ ಪ್ರಾಂಶುಪಾಲರವರೆಗೂ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅದನ್ನು ಕಂಡು ನನಗೆ ಆಶ್ಚರ್ಯವಾಗಿತ್ತು. ಆ ವ್ಯಕ್ತಿ ಅಧಿಕಾರದಿಂದ ಜನರನ್ನು ಗೆಲ್ಲಲಿಲ್ಲ, ಬದಲಿಗೆ ಪ್ರೀತಿಯಿಂದ ಗೆದ್ದಿದ್ದಾರೆ ಎನಿಸಿತ್ತು. ಅವರು ನಿಜಕ್ಕೂ ಸಮಾಜಕ್ಕೆ ಮಾದರಿ. | ಡಾ. ಗುರುರಾಜ ಕರ್ಜಗಿ ಖ್ಯಾತ ಚಿಂತಕ ನಾನು ಕಂಡ ಅತ್ಯಂತ ತತ್ವನಿಷ್ಠ ಹಾಗೂ ಸಾತ್ವಿಕ ಗುಣವುಳ್ಳ ಶ್ರೇಷ್ಠ ಜೀವಿ ನ್ಯಾ. ಡಾ. ಶಿವರಾಜ್ ಪಾಟೀಲ್. ನ್ಯಾಯ ನಿಷ್ಠುರತೆ ಜತೆಗೆ ಮಾನವೀಯತೆ ಹಾಗೂ ದಯಾಪರ ಚಿಂತನೆ ಅವರ ವೈಶಿಷ್ಟ್ಯವಾಗಿದ್ದು, ನ್ಯಾಯಾಂಗ ಹಾಗೂ ಸಮಾಜದಲ್ಲಿ ಅವರೊಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ತತ್ವ ಪದಗಳ ಬಗ್ಗೆ ಆಳವಾದ ಅಭ್ಯಾಸ ಮಾಡಿದ್ದಾರೆ. ಅವರ ಕಾನೂನು ಜ್ಞಾನ ಹಾಗೂ ಸಾಹಿತ್ಯ ಸೇವೆಯಿಂದ ನಾಡು ಶ್ರೀಮಂತವಾಗಿದೆ. 80ನೇ ವಸಂತಕ್ಕೆ ಕಾಲಿಡುತ್ತಿರುವ ಅವರಿಗೆ ಹಾರ್ದಿಕ ಶುಭಾಶಯಗಳು. | ಮನು ಬಳಿಗಾರ್ ಕ.ಸಾ.ಪ. ಅಧ್ಯಕ್ಷ 1980ರಿಂದ ನನ್ನ ಮತ್ತು ಅವರ ಒಡನಾಟವಿದೆ. ಶಿವರಾಜ ಪಾಟೀಲ್ರ ಅರ್ಥಪೂರ್ಣ ಬದುಕು ನಮ್ಮೆಲ್ಲರ ಬದುಕಿಗೂ ದಾರಿಯಾಗಿದೆ. | ಸುಭಾಷ್ ಬಿ.ಅಡಿ ನಿವೃತ್ತ ಉಪ ಲೋಕಾಯುಕ್ತ