

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ಮತ್ತು ಪೆಟ್ರೋಲ್ ಬೆಲೆ ಏರಿಸಿದಾಗ ಬಿಜೆಪಿ ನಾಯಕರು ಏಕೆ ಪ್ರತಿಭಟಿಸಲಿಲ್ಲ?, ದೇಶದಾದ್ಯಂತ ಸಂಚಲನ ಮೂಡಿಸಿರುವ ನೀಟ್ ಹಗರಣವು ಎಬಿವಿಪಿಗೆ ಕಾಣಿಸುತ್ತಿಲ್ಲವೇಕೆ? ಬಿಜೆಪಿ ಆಡಳಿತಾವಧಿಯಲ್ಲಿ ಏನು ನಡೆದರೂ ಪರವಾಗಿಲ್ಲವೇ? ಪ್ರಧಾನಿ ನರೇಂದ್ರ ಮೋದಿಗೊಂದು ನ್ಯಾಯ? ಮುಖ್ಯಮಂತ್ರಿ ಸಿದ್ದರಾಮಯ್ಯಗೊಂದು ನ್ಯಾಯಾನಾ? ಎಂದು ಜಿಲ್ಲಾ ಉಸ್ತುವಾರಿ ಸಚಿವಎಂ.ಸಿ.ಸುಧಾಕರ್ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ದ್ದಿಗಾರರೊಂದಿಗೆ ಮಾತನಾಡಿ, ಲೀಟರ್ ಪೆಟ್ರೋಲ್ ಬೆಲೆ ೧೦೦ ರೂ ದಾಟಿದ್ದು ಯಾರ ಕಾಲದಲ್ಲಿ?.ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ತೆಗೆದು ೧ ಸಾವಿರ ರೂಗಳಿಗೆ ಏರಿಸಿದ್ದನ್ನು ಪ್ರಶ್ನಿಸಬಾರದೇ?. ಬೆಲೆ ಏರಿಕೆಯನ್ನು ಬಿಜೆಪಿ ಮಾತ್ರ ಮಾಡಿದರೆ ಸಹಿಸಲಾಗುತ್ತದೆಯೇ? ಎಂದು ಕಿಡಿಕಾರಿದ್ದಾರೆ.
ಬಡಮಕ್ಕಳು ವೈದ್ಯರಾಗಲು ಏಕೈಕ ಭರವಸೆಯಂತಿದ್ದ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ.ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು ಇಂತಹ ಸಂದರ್ಭದಲ್ಲಿ ಎಬಿವಿಪಿ ಯಾಕೆ ಕಣ್ಣು ಬಾಯಿ ಮೂಗು ಮುಚ್ಚಿಕೊಂಡು ಕೂತಿದೆ. ಪಠ್ಯಪುಸ್ತಕ ಪರಿಷ್ಕರಣೆ, ಎಇಪಿ ರದ್ದು ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡಿದವರಿಗೆ ನೀಟ್ ಪರೀಕ್ಷೆಯ ಅವಾಂತರ ಕಣ್ಣಿಗೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಎಸ್‌ಇಪಿ ಜಾರಿಯಿಂದ ಅತಿಥಿಉಪನ್ಯಾಸಕರು, ಭಾಷಾ ಉಪನ್ಯಾಸಕರಿಗಾಗಲಿ ಯಾವುದೇ ತೊಂದರೆಯಿಲ್ಲ.ಪ್ರಧಾನ ಭಾಷಾವಿಷಯಗಳಲ್ಲಿ ಬದಲಾವಣೆ ತಂದಿದ್ದು ಮೂರು ಬದಲಿಗೆ ಎರಡು ಭಾಷೆಗಳ ವಿಭಾಗ ಮಾಡಲಾಗಿದೆ. ಸ್ಥಳೀಯವಾಗಿ ಇತರ ವಿಷಯಗಳನ್ನು ಅಳವಡಿಸಿಕೊಳ್ಳಲು ಬೋರ್ಡ್ಆಫ್ ಸ್ಟಡೀಸ್‌ಗೆ ಅವಕಾಶ ನೀಡಲಾಗಿದೆ.ಇದಕ್ಕೆಎನ್‌ಇಪಿಯಲ್ಲಿ ಅವಕಾಶ ಇರಲಿಲ್ಲ. ಭಾಷಾ ವಿಷಯದಲ್ಲಿ ಏನೋ ತೊಂದರೆ ಆಗುತ್ತೆ ಎನ್ನುವುದು ಕೆಲವರ ತಪ್ಪು ಗ್ರಹಿಕೆಯಿರಬಹುದು ಎಂದಿದ್ದಾರೆ.