VIDEO| ಅಪ್ಪನ ಕೊನೆಯ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಿದ ಜೂನಿಯರ್​ ಚಿರು!

Junior Chiru
Published on

ಬೆಂಗಳೂರು: ‘ಪೊಗರು’ ಚಿತ್ರದ ಜತೆಗೆ ಸರ್ಜಾ ಕುಟುಂಬದ ಅಭಿಮಾನಿಗಳಿಗೆ ಶುಕ್ರವಾರ ಇನ್ನೊಂದು ಗಿಫ್ಟ್ ಸಿಕ್ಕಿದೆ. ಆ ಉಡುಗೊರೆ ಏನೆಂದರೆ ‘ರಾಜಮಾರ್ತಾಂಡ’ ಚಿತ್ರದ ಟ್ರೇಲರ್.

ಹೌದು. ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರವಾದ ‘ರಾಜಮಾರ್ತಾಂಡ’ದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಜ್ಯೂನಿಯರ್ ಚಿರು ಅಪ್ಪನ ಚಿತ್ರದ ಟ್ರೈಲರ್​ ಅನ್ನು ಬಿಡುಗಡೆ ಮಾಡಿದ್ದಾನೆ. ಬೆಳಗ್ಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು ಒಳ್ಳೆಯ ವೀಕ್ಷಣೆ ಗಿಟ್ಟಿಸಿಕೊಳ್ಳುತ್ತಿದೆ. ಇದರ ಜತೆಗೆ ‘ಪೊಗರು’ ಪ್ರದರ್ಶನವಾಗುತ್ತಿರುವ ಎಲ್ಲ ಚಿತ್ರಮಂದಿರಗಳಲ್ಲೂ ಈ ಟ್ರೇಲರ್ ಪ್ರದರ್ಶನವಾಗಲಿದೆ. ಈ ಚಿತ್ರಕ್ಕೆ ಚಿರಂಜೀವಿ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಲಿದ್ದು, ಈಗಾಗಲೇ ಧ್ರುವ ಟ್ರೇಲರ್​ಗೆ ಧ್ವನಿ ನೀಡಿದ್ದಾರೆ.

‘ಪೊಗರು’ ಬಿಡುಗಡೆಯಾದ ನಂತರ, ಬಿಡುವು ಮಾಡಿಕೊಂಡು ಇಡೀ ಚಿತ್ರಕ್ಕೆ ಡಬ್ ಮಾಡುವುದಾಗಿ ಹೇಳಿದ್ದಾರಂತೆ. ಬರೀ ಧ್ರುವ ಮಾತ್ರವಲ್ಲ, ಈ ಚಿತ್ರಕ್ಕೆ ದರ್ಶನ್ ಅವರು ಕಾಮೆಂಟರಿ ನೀಡಲಿದ್ದು, ಈ ಮೂಲಕ ಕನ್ನಡ ಚಿತ್ರರಂಗದ ಇಬ್ಬರು ಜನಪ್ರಿಯ ಸ್ಟಾರ್​ಗಳು ಈ ಚಿತ್ರದ ಜತೆಗೆ ಗುರುತಿಸಿಕೊಳ್ಳುತ್ತಿರುವುದು ವಿಶೇಷ. ರಾಮ್ಾರಾಯಣ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ದೀಪ್ತಿ ಸತಿ ನಟಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಹಾಡುಗಳನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net