ಎಸ್ಎಸ್ಎಲ್​​ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಹಾಜರಾದ ವಿದ್ಯಾರ್ಥಿಗಳೆಷ್ಟು, ಉತ್ತೀರ್ಣರಾದವರೆಷ್ಟು?

result
Published on


ಬೆಂಗಳೂರು: ಜೂನ್ 2023ರ ಎಸ್ಎಸ್ಎಲ್​​ಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು (ಜೂ.30) ಶುಕ್ರವಾರ ಪ್ರಕಟವಾಗಿದೆ. ಪರೀಕ್ಷೆಗೆ ಒಟ್ಟು 111781 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 46270 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ.75 ರಷ್ಟು ಹಾಜರಾತಿ ಕೊರತೆಯಿದ್ದ ಕಾರಣದಿಂದ ಎಸ್ಎಸ್ಎಲ್​​ಸಿ ಮುಖ್ಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ 2446 ವಿದ್ಯಾರ್ಥಿಗಳು ಸಹ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 2020 ವಿದ್ಯಾರ್ಥಿಗಳು ಹಾಜರಾಗಿದ್ದು, 108 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇಂದು ಮಧ್ಯಾಹ್ನ 12ಗಂಟೆಯ ನಂತರ ಎಸ್​​​​ಎಂಎಸ್​​​​ ಮೂಲಕ ರವಾನಿಸಲಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳ ವೈಯಕ್ತಿಕ ಫಲಿತಾಂಶವನ್ನು https //karresults.nic.inನಲ್ಲಿ ವೀಕ್ಷಿಸಬಹುದಾಗಿದೆ.
ಶಾಲೆಗಳ ಕ್ರೋಢಿಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಲಿಕ ಅಂಕಪಟ್ಟಿಯನ್ನುhttps //kseab.karnataka.gov.in ಜಾಲತಾಣದ ಶಾಲಾ ಲಾಗಿನ್​​​ನಲ್ಲಿ ಇಂದು ಮಧ್ಯಾಹ್ನ 1 ಗಂಟೆಯ ನಂತರ ನೀಡಲಾಗುವುದು. ಶಾಲಾ ಹಂತದಲ್ಲಿ ಅಂದೇ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಪರೀಕ್ಷಾ ಫಲಿತಾಂಶವನ್ನು ಪ್ರೌಢಶಾಲೆಗಳಲ್ಲಿ ಆ ದಿನವೇ ಪ್ರಕಟಿಸಲಾಗುವುದು.

ಎಸ್ಎಸ್ಎಲ್​​ಸಿ ಪೂರಕ ಪರೀಕ್ಷೆಯನ್ನು ನಿಗದಿತ ವೇಳಾಪಟ್ಟಿಯಂತೆ 12-06-2023ರಿಂದ 19-06-2023ರವರೆಗೆ ಒಟ್ಟು 458 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು 21-06-2023ರಿಂದ 26-06-2023ರವರೆಗೆ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 51 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗಿದೆ. ಒಟ್ಟು 9256 ಮೌಲ್ಯಮಾಪಕರು ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net