

ನ್ಯೂಜೆರ್ಸಿ: ಲೌಂಗಿಕ ದೌರ್ಜನ್ಯಕ್ಕೆ ಒಳಗಾಗಿ, ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಹಿಳೆಯ ಬಳಿ ನ್ಯಾಯಾಧೀಶ ಕೇಳಬಾರದ ಪ್ರಶ್ನೆ ಕೇಳಿ ಕೆಲಸವನ್ನೇ ಕಳೆದುಕೊಂಡಿದ್ದಾನೆ.
ನ್ಯೂಜೆರ್ಸಿಯಲ್ಲಿ ಘಟನೆ ನಡೆದಿದೆ. ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಜಾನ್ ರುಸ್ಸೋ ಎಡವಟ್ಟು ಮಾಡಿಕೊಂಡು, ಕೆಲಸ ಕಳೆದುಕೊಂಡವನು. ಈತ ಮಹಿಳೆಯೊಂದಿಗೆ ಆಡಿದ ಅಶ್ಲೀಲ ಮಾತಿಗೆ ನ್ಯೂಜೆರ್ಸಿಯ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರುಸ್ಸೋ ಅವರು ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ತೀರ್ಪು ನೀಡುವ ಸ್ಥಾನದಲ್ಲಿ ಕುಳಿತುಕೊಳ್ಳದಂತೆ ಶಾಶ್ವತ ನಿರ್ಬಂಧ ವಿಧಿಸಿದೆ.
ರುಸ್ಸೋ ನಾಲ್ಕು ವರ್ಷದ ಹಿಂದೆ ಮಾಡಿದ ಅಪರಾಧಕ್ಕೆ ಇದೀಗ ಶಿಕ್ಷೆ ನೀಡಲಾಗಿದೆ. 2016ರಲ್ಲಿ ಮಹಿಳೆಯೋರ್ವರು ತನ್ನ ಮೇಲೆ ಪುರುಷನೋರ್ವ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆತ ನನ್ನ ವಿಚ್ಛೇದಿತ ಪತಿ. ಅಷ್ಟೇ ಅಲ್ಲ ಜೀವಬೆದರಿಕೆ ಹಾಕಿದ್ದಾನೆ. ಮನೆಯನ್ನೇ ನನ್ನ ಮಗಳ ಬಗ್ಗೆಯೂ ಅಶ್ಲೀಲ, ಅನುಚಿತವಾಗಿ ಮಾತನಾಡಿದ್ದಾನೆ. ಮನೆಯನ್ನೇ ಸುಡುತ್ತೇನೆ ಎನ್ನುತ್ತಾನೆ. ಇಂಥ ದೌರ್ಜನ್ಯಗಳ ವಿರುದ್ಧ ನ್ಯಾಯಬೇಕು ಎಂದು ಕೋರ್ಟ್ಗೆ ಹೋಗಿದ್ದರು.
ಪ್ರಕರಣದ ವಿಚಾರಣೆಯ ವೇಳೆ ಈ ನ್ಯಾಯಾಧೀಶ ಆಕೆಯ ಬಳಿ, ನಿಮ್ಮ ಮೇಲೆ ಆ ಪುರುಷ ರೇಪ್ ಮಾಡಲು ಬಂದಾಗ ಅಥವಾ ಬಲವಂತದಿಂದ ಸಂಭೋಗ ಮಾಡಲು ಪ್ರಯತ್ನಿಸಿದಾಗ ಏನು ಮಾಡಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾನೆ. ಆಕೆ, ಗೊತ್ತಿದೆ, ಆದಷ್ಟು ಅವರ ವಿರುದ್ಧ ಹೋರಾಡಿ, ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದೇನೆ ಎಂದು ಉತ್ತರಿಸಿದ್ದಾಳೆ.
ಆದರೆ ನ್ಯಾಯಾಧೀಶ ಮಹಿಳೆಯ ಉತ್ತರದಿಂದ ಸಮಾಧಾನಗೊಳ್ಳದೆ, ಮತ್ತೇನಾದರೂ ಮಾಡಿದ್ದೀರಾ ಎಂದಿದ್ದಾನೆ. ಅಲ್ಲದೆ ತಾನೇ ಮಾತು ಮುಂದುವರಿಸಿ, ನೀವು ನಿಮ್ಮ ದೇಹದ ಆ ಅಂಗವನ್ನು ಮುಚ್ಚಿಕೊಂಡಿದ್ದೀರಾ? ಎರಡೂ ಕಾಲುಗಳನ್ನು ಗಟ್ಟಿಯಾಗಿ ಒಂದಕ್ಕೊಂದು ಅಂಟಿಸಿಕೊಂಡು ಮುಚ್ಚಿಕೊಂಡಿದ್ದೀರಾ? ಪೊಲೀಸರಿಗೆ ಫೋನ್ ಮಾಡಿದ್ದೀರಾ? ಇವಿಷ್ಟರಲ್ಲಿ ಏನು ಮಾಡಿದ್ದೀರಿ ಎಂದು ಅಶ್ಲೀಲ ಪ್ರಶ್ನೆಗಳನ್ನು ಹಾಕಿದ್ದ.ಅಷ್ಟೇ ಅಲ್ಲ, ಇನ್ನು ಮುಂದೆ ಇಂಥ ಸನ್ನಿವೇಶಗಳು ಎದುರಾದರೆ ನಿಮ್ಮ ಕಾಲುಗಳನ್ನು ಒಂದಕ್ಕೊಂದು ಹೊಂದಿಸಿ ಮುಚ್ಚಿಕೊಳ್ಳಿ ಎಂದು ಬಿಟ್ಟಿ ಸಲಹೆಯನ್ನೂ ನೀಡಿದ್ದ.
ಆ ಮಹಿಳೆ ಕೋರ್ಟ್ನಿಂದ ಹೊರಹೋಗುತ್ತಿದ್ದಂತೆ ಅದರ ಬಗ್ಗೆಯೇ ಜೋಕ್ ಮಾಡಿದ್ದ ಎಂದು ಕೂಡ ಆ ಸಮಯದಲ್ಲಿ ಕೋರ್ಟ್ನಲ್ಲಿ ಇದ್ದವರು ಸಾಕ್ಷಿ ಹೇಳಿದ್ದರು.
ನ್ಯಾಯಾಧೀಶನ ವಿರುದ್ಧ ದಾಖಲಾದ ದೂರಿನ ಸಮಗ್ರ ವಿಚಾರಣೆಯ ಬಳಿಕ ಆತನನ್ನು ಶಾಶ್ವತವಾಗಿ ಹೊರಗೆ ಕಳಿಸಲಾಗಿದೆ. ಅಷ್ಟೇ ಅಲ್ಲ, ಆ ವ್ಯಕ್ತಿಗೆ, ಲೈಂಗಿಕ ದೌರ್ಜನ್ಯ ಪ್ರಕರಣದ ಸೂಕ್ಷ್ಮತೆ, ಗಂಭೀರತೆ ಗೊತ್ತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. (ಏಜೆನ್ಸೀಸ್)