

ಧಾರವಾಡ: ನಗರದ ಕಿಟೆಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಯು.ಜಿ. ಝೋನ್ ಯುಥ್ ಫೆಸ್ಟಿವಲ್‌ನಲ್ಲಿ ಇಲ್ಲಿನ ವಿದ್ಯಾಗಿರಿ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು 9 ಪ್ರಶಸ್ತಿ ಪಡೆದಿದ್ದಾರೆ.
ಕನ್ನಡ ಮಾತುಗಾರಿಕೆ ವಿಭಾಗದಲ್ಲಿ ಪ್ರತೀಕ ಹೆಗಡೆ ಪ್ರಥಮ, ಕ್ಲಾಸಿಕಲ್ ನೃತ್ಯದಲ್ಲಿ ರಿಯಾ ವರ್ಣೇಕರ, ಸುನಿಧಿ ಗೊಲ್ಲರ ಪ್ರಥಮ, ಸ್ಪಾಟ್ ಪೇಂಟಿ0ಗ್‌ನಲ್ಲಿ ಚಿಂತನ್ ಕಮ್ಮಾರ ತೃತೀಯ, ರಂಗೋಲಿಯಲ್ಲಿ ರಾಜೇಶ್ವರಿ ತೃತೀಯ, ಗ್ರುಪ್ ಸಾಂಗ್‌ನಲ್ಲಿ ಚೈತ್ರಾ ಭಟ್ ಹಾಗೂ ತಂಡ ತೃತೀಯ, ಸೋಲೋ ಸಾಂಗ್‌ನಲ್ಲಿ ಚೈತ್ರಾ ಭಟ್ ತೃತೀಯ, ಇನ್‌ಸ್ಟೂçಮೆಂಟ್ ವಿಭಾಗದ ತಬಲಾ ವಾದನದಲ್ಲಿ ಸುಮೇಧ ಪುರಾಣಿಕ ತೃತೀಯ, ಸ್ಕಿಟ್ ವಿಭಾಗದಲ್ಲಿ ಅಮೃತಾ ತಂಡ ತೃತೀಯ ಸ್ಥಾನ ಪಡೆದಿದೆ.
ಸಾಧಕ ವಿದ್ಯಾರ್ಥಿಗಳನ್ನು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಡಾ. ಸೂರಜ್ ಜೈನ್, ಎನ್.ಎಲ್. ಪುಡಕಲಕಟ್ಟಿ, ವಿಭಾ ಮುಗಳಿ ಹಾಗೂ ಸಿಬ್ಬಂದಿ ಅಭಿನಂದಿಸಿದರು.