ಯುವ ಪತ್ರಕರ್ತನ ಸಾವಿನ ತನಿಖೆಗೆ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸುತ್ತಿರುವ ಮಾಧ್ಯಮ ಸಿಬ್ಬಂದಿ

Journalist
Published on

ನವದೆಹಲಿ: ದೆಹಲಿಯ ಏಮ್ಸ್​ ಟ್ರಾಮಾ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಯುವ ಪತ್ರಕರ್ತನೋರ್ವ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿತ್ತು. ಆತ ಕೊವಿಡ್​-19 ಸೋಂಕಿನಿಂದ ಬಳಲುತ್ತಿದ್ದ. ಹಾಗಾಗಿ ಸೂಸೈಡ್ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು.

ಆದರೆ ಪತ್ರಕರ್ತ ತರುಣ್​ ಸಿಸೋಡಿಯಾ ಸಾವು ಆತ್ಮಹತ್ಯೆಯಲ್ಲ. ಅದೊಂದು ಕೊಲೆ ಎಂದು ನಂತರ ಹೇಳಲಾಗಿತ್ತು. ನಾನು ಕೊಲೆಯಾಗುವ ಸಾಧ್ಯತೆ ಇದೆ ಎಂದು ತರುಣ್ ತನ್ನ ಸ್ನೇಹಿತರಿಗೆ ಕಳಿಸಿದ್ದ ಮೆಸೇಜ್​ ವೈರಲ್​ ಆಗಿತ್ತು. ಹಾಗಾಗಿ ಅವನ ಸಾವಿನ ಬಗ್ಗೆ ಅನುಮಾನ ಹೆಚ್ಚಾಗಿದೆ. ಇದನ್ನೂ ಓದಿ: ಅತ್ಯಂತ ವೇಗವಾಗಿ ಕಾರು ಓಡಿಸುತ್ತಿದ್ದವನ ತಡೆದ ಪೊಲೀಸ್​; ಆತ ಹೇಳಿದ ಹಾವಿನ ವಿಷಯ ಕೇಳಿ ಬೆಚ್ಚಿಬಿದ್ದರು

ಇದೀಗ ತರುಣ್​ ಸಾವಿನ ತನಿಖೆಗೆ ಒತ್ತಾಯಿಸಿ ದೆಹಲಿಯ ಪತ್ರಕರ್ತರು ಪ್ರೆಸ್​ಕ್ಲಬ್​ ಆಫ್​ ಇಂಡಿಯಾದ  ಹೊರಗೆ ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದು ಆತ್ಮಹತ್ಯೆ ಅಲ್ಲ ಎಂದೇ ಅವರು ಪ್ರತಿಪಾದಿಸುತ್ತಿದ್ದಾರೆ. ಮಾಸ್ಕ್​ ಧರಿಸಿ, ಕೈಯಲ್ಲಿ ಪೋಸ್ಟರ್​​ಗಳನ್ನು ಹಿಡಿದು ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net