ಗ್ರಾಮೀಣ ಬಸ್ ಪಾಸ್ ಜಾರಿಗೆ ನೀಡಿದ ಸಿದ್ದರಾಮಯ್ಯಗೆ ಕೆಯುಡಬ್ಲೂಜೆ ಅಭಿನಂದನೆ

bus pass2 (2)
Published on

ಬೆಂಗಳೂರು:
ದಶಕಗಳ ಕನಸಾಗಿದ್ದ ಗ್ರಾಮೀಣ ಬಸ್ ಪಾಸ್ ಸೌಲಭ್ಯವನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಸ್ ಪಾಸ್ ಬಗ್ಗೆ ದಾವಣಗೆರೆಯಲ್ಲಿ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ಬಗ್ಗೆ ಮಾತು ಕೊಟ್ಟಿದ್ದೆ. ಆ ಬೇಡಿಕೆ ಈಡೇರಿಸಿ ಜಾರಿಗೆ ನೀಡಿದ್ದೇನೆ ಎಂದರು.
ನುಡಿದಂತೆ ನಡೆದು ಬೇಡಿಕೆ ಈಡೇರಿಸಿದ್ದೀರಿ. ಅದಕ್ಕಾಗಿಯೇ ಅಭಿನಂದನೆ ಸಲ್ಲಿಸಲು ಬಂದಿದ್ದೇವೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದಾಗ, ಸಂತೋಷ. ಪತ್ರಕರ್ತರಿಗೆ, ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜ್ಯ ಘಟಕದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಟಿವಿ9 ರಾಜಕೀಯ ವಿಭಾಗ ಮುಖ್ಯಸ್ಥ ಪ್ರಮೋದ್ ಶಾಸ್ತ್ರಿ, ನ್ಯೂಸ್ 18 ರಾಜಕೀಯ ಬ್ಯೂರೋ ಮುಖ್ಯಸ್ಥ ಚಿದಾನಂದ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೆ.ವಿ.ಪ್ರಭಾಕರ್ ಗೆ ಸನ್ಮಾನ:
ಬಸ್ ಪಾಸ್ ಸೌಲಭ್ಯವನ್ನು ದೊರಕಿಸಿ ಕೊಡಲು ಸಹಕರಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನೂ ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net