ನಿರ್ದೇಶಕಿಯಾದ ಪತ್ರಕರ್ತೆ : ‘ಬಾಂದ್ರಾ ಬಾಯ್’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ ನೀರೂ ಶರ್ಮಾ

ನೀರೂ ಶರ್ಮಾ
ನೀರೂ ಶರ್ಮಾ
Published on

ಪ್ರಮುಖ ಮುಖ್ಯಾಂಶಗಳು

  • ಮೊದಲು ಪತ್ರಕರ್ತರಾಗಿ ಬಳಿಕ ನಿರ್ದೇಶಕರ ಪಟ್ಟಿಯೇ ಇದೆ
  • ಹೊಸದಾಗಿ ನೀರೂಶರ್ಮಾ ಸೇರ್ಪಡೆ
  • ಸದ್ದು ಮಾಡಿದ 21 ನಿಮಿಷದ ಬಾಂದ್ರಾ ಬಾಯ್​ ಸಿನಿಮಾ
ಆರಂಭದಲ್ಲಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿ, ವರ್ಷ ಕಳೆದಂತೆ ಸಿನಿಮಾ ನಿರ್ದೇಶಕರಾದ ಪಟ್ಟಿಯೇ ದೊಡ್ಡದಿದೆ. ಬಾಲಿವುಡ್ ನಿರ್ದೇಶಕರಾದ ಭಾವನಾ ತಲ್ವಾರ್, ಬಿ.ಆರ್.ಚೋಪ್ರಾ, ಖಾಲಿದ್ ಮೊಹಮ್ಮದ್, ಸುಭಾಷ್ ಕಪೂರ್, ಕನ್ನಡದ ಪಿ. ಶೇಷಾದ್ರಿ, ಇತ್ತೀಚೆಗೆ ನಿಧನರಾದ ಎನ್.ಎಸ್.ಶಂಕರ್ ಅವರು ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳುವ ಮೊದಲು ಬಾತ್ಮೀದಾರಿಕೆ ಮಾಡಿದವರು. ಇದೀಗ ಈ ಪಟ್ಟಿಗೆ ಹೊಸ ನಿರ್ದೇಶಕಿ ಸೇರ್ಪಡೆಯಾಗುತ್ತಿದ್ದಾರೆ. ಅವರೇ ನೀರೂ ಶರ್ಮಾ. ಸುಮಾರು ಎರಡು ದಶಕಗಳ ಕಾಲ ಹಿಂದಿಯ ಪ್ರಮುಖ ಪತ್ರಿಕೆ, ವಾಹಿನಿಗಳಲ್ಲಿ ಸಿನಿಮಾ ವದಿಗಾರರಾಗಿ ಕೆಲಸ ಮಾಡಿದ್ದ ನೀರೂ ಶರ್ಮಾ ಇದೀಗ ‘ಬಾಂದ್ರಾ ಬಾಯ್’ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಸ್ಕೂಲ್‌ನಲ್ಲಿ ಡೈರೆಕ್ಟರ್ ಕೋರ್ಸ್ ಮುಗಿಸಿರುವ ಅವರು ಈ ಕಿರುಚಿತ್ರಕ್ಕೆ ಕಥೆ ಬರೆದು, ನಿರ್ದೇಶಿಸಿದ್ದಾರೆ. ಮಾಧ್ಯಮ, ಅಧಿಕಾರ ಮತ್ತು ಸಾಮಾಜಿಕ ತೀರ್ಪಿನ ನಡುವಿನ ಸಂಕೀರ್ಣ ಸಂಬಂಧಗಳನ್ನು‘ಬಾಂದ್ರಾ ಬಾಯ್’ ಅನ್ವೇಷಿಸುತ್ತದೆ. ಆಹ್ವಾನ್ ಕುಮಾರ್, ಧರ್ಮೇಂದ್ರ ಗೋಹಿಲ್, ಲೋಚನ್, ಯಶ್ ಪಡ್ನೇಕರ್, ಶ್ಯಾಮ್ ಥೋಬರೆ, ಪವನ್ ತಿವಾರಿ, ಐಶ್ವರ್ಯ ಮನೋಹರ್, ಹಿಮಾಂಶಿ ಮಂಡಾಲಿಯ, ನಂದಿನಿ ಶರ್ಮಾ ಕಲಾಬಳಗದಲ್ಲಿದ್ದಾರೆ. ಮಂಗಳೂರು ಚಿತ್ರೋತ್ಸವ ಸೇರಿ ರಾಷ್ಟ್ರ, ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗಳಿಗೆ ‘ಬಾಂದ್ರಾ ಬಾಯ್’ ಆಯ್ಕೆಯಾಗಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net