

ಬೆಂಗಳೂರು:
ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ನೀಡಲು ಇದ್ದ ಕಠಿಣ ಷರತ್ತನ್ನು ಸಡಿಲಿಸಿರುವ ರಾಜ್ಯ ಸರ್ಕಾರ, ಈ ಮೊದಲು ಕಡ್ಡಾಯಗೊಳಿಸಲಾಗಿದ್ದ ಪೂರ್ಣಾವಧಿ ನೇಮಕ ನಿಯಮ ಕೈಬಿಟ್ಟಿದೆ.
ಗ್ರಾಮೀಣ ಭಾಗದಲ್ಲಿರುವ ಅರೆಕಾಲಿಕ ಪತ್ರಕರ್ತ/ವರದಿಗಾರರರಾಗಿದ್ದಲ್ಲಿ ಅವರ ನೇಮಕಾತಿ ಪತ್ರ ಅಥವಾ ಸಂಪಾದಕರು/ ಮುಖ್ಯಸ್ಥರಿಂದ ಶಿಾರಸ್ಸು ಮಾಡಿದ ಪತ್ರ ಇದ್ದವರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಸಂಸ್ಥೆಯಿಂದ ಪಡೆಯು ತ್ತಿರುವ ಲೈನೇಜ್, ಸಂಭಾವನೆ ಬಗ್ಗೆ 11 ತಿಂಗಳ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ಉಚಿತ ಬಸ್ ಪಾಸ್ ಪಡೆಯದಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ೋಷಣೆ ಮಾಡಿದ್ದಂತೆ ಫಲಾನುಭವಿ ಪತ್ರಕರ್ತರುಗಳ ಸಂಖ್ಯೆಯು 5222 ಮೀರಬಾರದಂತೆ ಷರತ್ತು ವಿಧಿಸಿರುವ ತಿದ್ದುಪಡಿ ಆದೇಶವನ್ನು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯ ದರ್ಶಿ ಎಂ.ಜಿಸಿಂತ ಅವರು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.
ಪೂರ್ಣಾವಧಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪತ್ರಕರ್ತರು ಮಾತ್ರ ಉಚಿತ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಬಹುದೆಂದು ವಿಧಿಸಲಾಗಿದ್ದ ಕಠಿಣ ಷರತ್ತು ಕೈಬಿಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲೂೃಜೆ) ಸರ್ಕಾರಕ್ಕೆ ಮನವಿ ಮಾಡಿತ್ತು. ಮನವಿ ಮಾನ್ಯ ಮಾಡಿರುವ ಸರ್ಕಾರ, ತಿದ್ದುಪಡಿ ಆದೇಶ ಹೊರಡಿಸುವ ಮೂಲಕ ಗ್ರಾಮೀಣ ಭಾಗದ ಪತ್ರಕರ್ತರಿಗೂ ಬಸ್ ಪಾಸ್ ಸೌಲಭ್ಯ ಸಿಗುವಂತೆ ಅವಕಾಶ ಮಾಡಿಕೊಟ್ಟಿದೆ.
ಅರ್ಜಿ ಸಲ್ಲಿಕೆ ಎಲ್ಲಿ?
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಸೇವಾ ಸಿಂಧು ಪೋರ್ಟ್‌ಲ್‌ನಲ್ಲಿ ಆನ್ ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಪತ್ರಕರ್ತರು ಅಪ್ ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.