

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯ ಕಥೆ ಹಾಗೂ ಕೆಲವು ಪಾತ್ರಗಳು ಸಾಕಷ್ಟು ಅಭಿಮಾನಿಗಳ ಮನೆ-ಮನ ತಲುಪಿದ್ದವು. ಬ್ರದರ್-ಇನ್-ಲಾ ಅನ್ಕೊಂಡು ಮಿಂಚುತ್ತಿದ್ದ ಮಾನ್ಸಿ ಪಾತ್ರಧಾರಿ ಶಿಲ್ಪಾ ಐಯ್ಯರ್ ಇದೀಗ ತಮ್ಮ ಪತಿಗಾಗಿ ನೀಡಿದ ಪೆಂಟಿಂಗ್ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದೆ.
ಶಿಲ್ಪಾ ಅಯ್ಯರ್ ಮತ್ತು ಉದ್ಯಮಿ ಸಚಿನ್ ಮಾರ್ಚ್ 13ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ 6 ತಿಂಗಳ ಸಂಭ್ರಮದಲ್ಲಿದ್ದಾರೆ. ಪತಿಗೆ ಸ್ಪೆಷಲ್ ವಿಶ್ ಮಾಡಬೇಕು ಎಂದು ತಮ್ಮ ರಕ್ತದಲ್ಲಿ ಪತಿ ಭಾವಚಿತ್ರ ಬಿಡಿಸಿ ಗಿಫ್ಟ್ ಮಾಡಿದ್ದಾರೆ.
ಸಂಜೀವ್ ಸಂಗಮ್ ಎನ್ನುವ ಆರ್ಟಿಸ್ಟ್ನ ಭೇಟಿ ಮಾಡಿದ ಶಿಲ್ಪಾ ತಮ್ಮ ರಕ್ತವನ್ನು ದಾನ ಮಾಡುವ ರೀತಿಯಲ್ಲಿ ಸಿರಿಂಜ್ ಫಿಲ್ ಮಾಡಿ ಕೊಟ್ಟಿದ್ದಾರೆ.ಆ ರಕ್ತವನ್ನು ಬಳಸಿ ಸಂಗಮ್ ಎಂಬುವರು ಶಿಲ್ಪಾ ಪತಿ ಸೂಟ್ ಹಾಕಿರುವ ಫೋಟೋವನ್ನು ಬಿಡಿಸಿ ಫ್ರೇಮ್ ಹಾಕಿಕೊಟ್ಟಿದ್ದಾರೆ. ಹೀಗೆ ಮಾಡಿಸಲು ಸುಮಾರು 6,000 -10,000 ರೂಪಾಯಿ ಖರ್ಚು ಮಾಡಿದ್ದಾರೆ.