ಒಂದೇ ಕುಟುಂಬದ 6 ಜನರನ್ನು ಕೊಂದಿದ್ದ ಮಹಿಳೆಯಿಂದ ಜೈಲಿನಲ್ಲಿ ಆತ್ಮಹತ್ಯೆ ಪ್ರಯತ್ನ

sucide
Published on

ಕೋಳಿಕೋಡ್​​: ಕುಟುಂಬದ ಆರು ಜನರನ್ನು ಕೊಂದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜಾಲಿ ಥಾಮಸ್​ ಜೈಲಿನಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ.

14 ವರ್ಷಗಳ ಅವಧಿಯಲ್ಲಿ ಜಾಲಿ ಥಾಮಸ್​ ತನ್ನ ಕುಟುಂಬದ ಆರು ಜನರನ್ನು ಉಪಾಯ ಮಾಡಿ ಕೊಲೆ ಮಾಡಿದ್ದಳು. ಸೈನೆಡ್​ ಬಳಸಿಕೊಂಡು ಎಲ್ಲರನ್ನು ಕೊಂದಿದ್ದ ಜಾಲಿಯನ್ನು 2019ರಲ್ಲಿ ಪೊಲೀಸರು ಬಂಧಿಸಿದ್ದರು. ಜಾಲಿ ಸೇರಿದಂತೆ ಒಟ್ಟು ಮೂರು ಜನರು ಆ ಕೊಲೆಗಳಲ್ಲಿ ಭಾಗಿಯಾಗಿದ್ದನ್ನು ಪತ್ತೆ ಹಚ್ಚಿ ಅವರನ್ನೆಲ್ಲ ಜೈಲಿಗೆ ಕಳುಹಿಸಲಾಗಿತ್ತು. ವರದಿಯ ಪ್ರಕಾರ ಆಕೆ ಜೈಲಿಗೆ ಬಂದಾಗಿನಿಂದಲೂ ಆಕೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಕಾಲೇಜಿನಲ್ಲಿ ಆಕೆಗೆ ಕೌನ್ಸೆಲಿಂಗ್​ ನಡೆಸಲಾಗುತ್ತಿತ್ತು.

ಇಂದು ಮುಂಜಾನೆ ಜಾಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net