

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳ ಮೇಲೆ ಒತ್ತಡ ಹೇರಲು ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ರಚಿಸಲಾಗಿದೆ.
ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಜತೆಯಾಗಿ ಪ್ರಬಲ ಹೋರಾಟ ನಡೆಸುವುದೇ ಸಮಿತಿಯ ಉದ್ದೇಶ. ಇದರ ಅಧ್ಯಕ್ಷ ಸ್ಥಾನಕ್ಕೆ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಹೆಸರು ಘೋಷಣೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ
ಶಾಶ್ವತ ನೀರಾವರಿ ಹೋರಾಟದ ಸಂಕಲ್ಪದ ಸಭೆಯಲ್ಲಿ ಮೂರು ಪ್ರಮುಖ ತೀರ್ಮಾನಿಸಲಾಯಿತು. ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ರಚನೆ, ಎಚ್.ಎನ್ ಹಾಗೂ ಕೆ.ಸಿ.ವ್ಯಾಲಿ ನೀರಿನ ಶುದ್ದೀಕರಣ ಖಾತ್ರಿ, ಕೃಷ್ಣ ನದಿ ನೀರಿನ ಪಾಲು ಪಡೆಯುವುದು ಸೇರಿದಂತೆ ಸಮಗ್ರ ನೀರಾವರಿ ಸೌಲಭ್ಯಕ್ಕೆ ಒತ್ತಾಯದ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಜಂಟಿ ಕ್ರಿಯಾ ಸಮಿತಿಗಳ ರಚನೆಯ ಘೋಷಣೆಯಾಯಿತು.
*ಜಂಟಿ ಹೋರಾಟದ ಶಕ್ತಿ
ಕಳೆದ ೩೦ ವರ್ಷಗಳಿಂದಲೂ ಹೋರಾಡುತ್ತಿದ್ದರೂ ನೀರಾವರಿ ವಿಚಾರವಾಗಿ ನ್ಯಾಯ ಸಿಕ್ಕಿಲ್ಲ. ಇದಕ್ಕೆ
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಿಡಿ ಬಿಡಿಯಾಗಿ ಹೋರಾಟ ನಡೆಸುವುದರ ಬದಲಿಗೆ ಪ್ರಬಲ ಶಕ್ತಿಯನ್ನು ತೋರಿಸಲು ಜಂಟಿ ಕ್ರಿಯಾ ಸಮಿತಿ ರಚಿಸಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದ್ದಾರೆ.