ಈ ಕಾರಣಕ್ಕೆ ನಾನು ಯಾರನ್ನು ದ್ವೇಷಿಸುವುದಿಲ್ಲ; ಹಾಲಿವುಡ್​ ನಟ ಜಾನಿ ಡೆಪ್ ಸ್ಪಷ್ಟನೆ | Johnny Depp

Hollywood Actor Johnny Depp
Published on

ನವದೆಹಲಿ: ಹಾಲಿವುಡ್ ಸೂಪರ್ ಸ್ಟಾರ್​​ ಜಾನಿ ಡೆಪ್(Johnny Depp). ಇತ್ತೀಚೆಗೆ ಅವರು ತಮ್ಮ ಮಾಜಿ ಪತ್ನಿ ಅಂಬರ್ ಹರ್ಡ್ ಅವರೊಂದಿಗಿನ ವಿಚ್ಛೇದನ ಮತ್ತು ಕಾನೂನು ಹೋರಾಟಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆ ಸಂದರ್ಭದಲ್ಲಿ ಅನೇಕರು ಅವರನ್ನು ಟೀಕಿಸಿದ್ದರು. ದ್ವೇಷಿಸುವವರ ಕುರಿತು ಜಾನಿ ಡೆಪ್​​ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ನಟ ಜಾನಿ ಡೆಪ್​​​ ವಿಚ್ಛೇದನದ ಸಮಯದಲ್ಲಿ ಅನೇಕರು ಅವನ ವಿರುದ್ಧವಾಗಿದ್ದರೂ ಎಂದು ಬಹಿರಂಗಪಡಿಸಿದ್ದಾರೆ. ಮಾಜಿ ಪತ್ನಿ ಅಂಬರ್ ಹರ್ಡ್ ಅವರೊಂದಿಗಿನ ವಿಚ್ಛೇದನದ ಸಮಯದಲ್ಲಿ ನನ್ನ ಜೀವನವು 'ಟೆಲಿವಿಷನ್ ಸೋಪ್ ಒಪೆರಾ' ಆಗಿ ಮಾರ್ಪಟ್ಟಿತ್ತು. ಈಗ ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.

ಪ್ರಾಮಾಣಿಕವಾಗಿ ಆ ಸಂದರ್ಭದಲ್ಲಿ ಎಲ್ಲರೂ ನನ್ನ ವಿರುದ್ಧ ಹೇಗೆ ಇದ್ದರು ಎಂಬುದನ್ನು ಯೋಚಿಸಬಹುದು. ಎಲ್ಲವನ್ನೂ ನೆನಪಿಸಿಕೊಳ್ಳಬಲ್ಲೆ ಅದು ಅಂತ್ಯವಿಲ್ಲದ ವಿಷಯ. ನಾವೆಲ್ಲರೂ ಬಹಳಷ್ಟು ವಿಷಯಗಳನ್ನು ಎದುರಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಅನುಭವಿಸುವ ಪ್ರತಿಯೊಂದೂ ವಿಷಯದಿಂದಲೂ ಏನಾನ್ನದಾರೂ ಕಲಿಯುತ್ತೇವೆ. ಉದಾಹರಣೆಗೆ ನೀವು ನಿಮ್ಮ ನಾಯಿಯನ್ನು ವಾಕಿಂಗ್ ಮಾಡಿಸುತ್ತಿದ್ದೀರಿ ಎಂದುಕೊಂಡರೆ, ನೀವು ದಾರಿಯುದ್ದಕ್ಕೂ ಎಲ್ಲೋ ಏನನ್ನಾದರೂ ಕಲಿಯುತ್ತೀರಿ. ಅದರಿಂದ ನಾನು ಕಲಿತಿದ್ದೇನೆ. ಹಾಗಾಗಿ ನನಗೆ ಯಾರ ಮೇಲೂ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ತಿಳಿಸಿದ್ದಾರೆ.

ನಾನು ಯಾರನ್ನು ದ್ವೇಷಿಸಲು ಸಮಯವನ್ನು ಮೀಸಲಿಡುವುದಿಲ್ಲ. ಏಕೆಂದರೆ ದ್ವೇಷಕ್ಕೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇರುತ್ತದೆ. ಏನಾಯಿತು ಎಂಬುದರ ಬಗ್ಗೆ ದ್ವೇಷ ಸಾಧಿಸುವುದಿಲ್ಲ ಬದಲಿಗೆ ಚಲನಚಿತ್ರ ನಿರ್ದೇಶಕನಾಗಿ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. ವಿಚ್ಛೇದನ ಪಡೆದ ನಂತರ ಜಾನಿ ತಮ್ಮ ಹೊಸ ಯೋಜನೆಯೊಂದಿಗೆ ಬಣ್ಣದ ಜಗತ್ತಿಗೆ ಮರಳಿದ್ದಾರೆ. 'ಮೋದಿ ಥ್ರೀ ಡೇಸ್ ಆನ್ ದಿ ವಿಂಗ್ಸ್ ಆಫ್ ಮ್ಯಾಡ್ನೆಸ್' ಮೂಲಕ ಸುಮಾರು 27 ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ಸ್ಯಾನ್ ಸೆಬಾಸ್ಟಿಯನ್ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಮೊದಲ ಬಾರಿಗೆ ಪ್ರದರ್ಶನಗೊಂಡಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net