ಇದೇ ಮೊದಲು... ಸಾರ್ವಜನಿಕವಾಗಿ ರಾಜಕೀಯ ಸಮಾವೇಶಕ್ಕಿಳಿದ ದಳಪತಿ ವಿಜಯ್​​; ಸೆಲಿಬ್ರಿಟಿಗಳು ಹೇಳಿದ್ದೇನು ಗೊತ್ತಾ? | Actor Vijay

Untitled design - 2024-10-27T153516.357
Published on

ಚೆನ್ನೈ: ತಮಿಳು ನಟ ವಿಜಯ್(Actor Vijay) ಅವರು ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಘೋಷಿಸಿದ ನಂತರ ಮೊದಲ ಬಾರಿಗೆ ರಾಜಕೀಯ ರ್ಯಾಲಿಯನ್ನು ಭಾನುವಾರ (ಅಕ್ಟೋಬರ್ 27) ನಡೆಸುತ್ತಿದ್ದಾರೆ. ಬಳಿಕ ವಿಲ್ಲುಪುರಂನಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರ ಚೊಚ್ಚಲ ಸಮ್ಮೇಳನಕ್ಕೆ ಕಾಲಿವುಡ್​​ ಸಿನಿಮಾ ಸೆಲಿಬ್ರಿಟಿಗಳು ಶುಭಹಾರೈಸಿದ್ದಾರೆ.

ದಳಪತಿ ವಿಜಯ್​​ಗೆ ಸೆಲಿಬ್ರಿಟಿಗಳ ವಿಶ್​​​

ಸೂರ್ಯ

ಸೂರ್ಯ ಮತ್ತು ಉದಯನಿಧಿ ಸ್ಟಾಲಿನ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಕಂಗುವ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ ಈ ಕುರಿತು ಮಾತನಾಡಿದ್ದಾರೆ. ಉದಯನಿಧಿ ಸ್ಟಾಲಿನ್ ಕಾಲೇಜಿನಲ್ಲಿ ನನಗಿಂತ ಎರಡು ವರ್ಷ ಜೂನಿಯರ್ ಆಗಿದ್ದರು ಮತ್ತು ಈಗ ಉಪಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ನನ್ನ ಶುಭಾಶಯಗಳು. ಮತ್ತು ನನ್ನ ಸ್ನೇಹಿತ ಈಗ ಹೊಸ ಪ್ರಯಾಣದಲ್ಲಿ ಸಾಗುತ್ತಿದ್ದಾರೆ, ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ವಿಜಯ್ ಸೇತುಪತಿ

ಟಿವಿಕೆ ನಾಯಕ ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ಅವರ ಮೊದಲ ರಾಜಕೀಯ ಸಮ್ಮೇಳನದ ಯಶಸ್ಸಿಗೆ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಜಯ್​ ಸೇತುಪತಿ ಬರೆದಿದ್ದಾರೆ.

ಶಿವಕಾರ್ತಿಕೇಯನ್

ಇಂದು ತಮ್ಮ ಹೊಸ ಪ್ರಯಾಣವನ್ನು ಪ್ರಾರಂಭಿಸಲಿರುವ ವಿಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ಶಿವಕಾರ್ತಿಕೇಯನ್​ ವಿಶ್​ ಮಾಡಿದ್ದಾರೆ.

ಜಯಂ ರವಿ

ಅಭಿನಂದನೆಗಳು ದಳಪತಿ ವಿಜಯ್ ಅಣ್ಣ, ಟಿವಿಕೆ ಸಾರ್ವಜನಿಕ ಸಮ್ಮೇಳನ..ಈ ಅದ್ಭುತ ಮೈಲಿಗಲ್ಲು. ನೀವು ಸಿನಿಮಾದಲ್ಲಿ ತೋರಿಸಿದ ಅದೇ ಉತ್ಸಾಹ ಮತ್ತು ಸಮರ್ಪಣೆಯನ್ನು ರಾಜಕೀಯಕ್ಕೆ ತನ್ನಿ. ಈ ಹೊಸ ಪ್ರಯಾಣದಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ!! ಎಂದು ಜಯಂ ರವಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ದಳಪತಿ ವಿಜಯ್ ಅವರ ಮೊದಲ ಸಾರ್ವಜನಿಕ ಸಮ್ಮೇಳನ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿ ವಿ ಸಲೈ ಗ್ರಾಮದಲ್ಲಿ ನಡೆಯಲಿದೆ. ಅಸಂಖ್ಯಾತ ಬೆಂಬಲಿಗರು ಈಗಾಗಲೇ ಸ್ಥಳಕ್ಕೆ ಜಮಾಯಿಸಿದ್ದು, ನಟನ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.

ಸಮ್ಮೇಳನದ ಮೊದಲು ಶನಿವಾರ (ಅಕ್ಟೋಬರ್​ 26) ವಿಜಯ್ ಅವರು ರ್ಯಾಲಿಯಲ್ಲಿ ಭಾಗವಹಿಸುವಾಗ ಸುರಕ್ಷತೆಗೆ ಆದ್ಯತೆ ನೀಡುವಂತೆ ಸ್ವಯಂಸೇವಕರನ್ನು ಕೇಳುವ ದೀರ್ಘ ಟಿಪ್ಪಣಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಅವರ ಹೇಳಿಕೆಯ ಒಂದು ಭಾಗ ಹೀಗಿದೆ, ನಿಮ್ಮ ಸುರಕ್ಷಿತ ಪ್ರಯಾಣವನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಸಮ್ಮೇಳನಕ್ಕೆ ಬರುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ನೀವೂ ಬರಬೇಕು ಎಂದು ತಿಳಿಸಿದ್ದಾರೆ. ಜತೆಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಮತ್ತು ರಸ್ತೆಗಳನ್ನು ನಿರ್ಬಂಧಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಸ್ಪರ್ಧಿಸಲಿದ್ದಾರೆ. ಅವರು ಕೊನೆಯದಾಗಿ ವೆಂಕಟ್ ಅವರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ದಿ ಗೋಟ್) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಎಚ್ ವಿನೋತ್ ಅವರೊಂದಿಗೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದು ಇದು ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೇನ್, ಪ್ರಿಯಾಮಣಿ, ಮಮಿತಾ ಬೈಜು ಮತ್ತು ಮೋನಿಶಾ ಬ್ಲೆಸ್ಸಿ ಸೇರಿದಂತೆ ಬಹುತಾರಾಗಣ ಸಿನಿಮಾದಲ್ಲಿರಲಿದೆ ಎನ್ನಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net