SSMB29 | ರಾಜಮೌಳಿ ಟೀಂಗೆ ಮತ್ತೊಬ್ಬ ಬಾಲಿವುಡ್​ ನಟ ಎಂಟ್ರಿ?; ಮಹೇಶ್​ಬಾಬು & ಪ್ರಿಯಾಂಕಾ ಜತೆ ಸೇರಲಿದ್ದಾರೆ ಈ ನಟ

Untitled design (64)
Published on

ಮುಂಬೈ: ಮಹೇಶ್​ ಬಾಬು ಮತ್ತು ಎಸ್ಎಸ್​​ ರಾಜಮೌಳಿ ಕಾಂಬಿನೇಷನ್​​ SSMB29 ಸಿನಿಮಾದ ಕುರಿತು ಅನೇಕ ಮಾಹಿತಿಗಳು ನಿರಂತರವಾಗಿ ಹೊರಬರುತ್ತಿವೆ. ಇತ್ತೀಚೆಗಷ್ಟೆ ಟಾಲಿವುಡ್​ ಟ್ಯಾಲೆಂಟೆಡ್​ ಡೈರೆಕ್ಟರ್​​​ SS ರಾಜಮೌಳಿ ಅವರು ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅವರ ಮುಂದಿನ ಚಿತ್ರ SSMB29 ಅನ್ನು ಖಚಿತಪಡಿಸಿದ್ದರು.

ರಾಜಮೌಳಿ ಅವರು ತಮ್ಮ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ ಸಿಂಹವನ್ನು ಪಂಜರದಲ್ಲಿ ಬಂಧಿಸಿ, ನಟನ ಪಾಸ್‌ಪೋರ್ಟ್ ಅನ್ನು ಸಹ ತೆಗೆದುಕೊಂಡಿರುವುದಾಗಿ ಪ್ರೇಕ್ಷಕರಿಗೆ ತಮಾಷೆಯಾಗಿ ತಮ್ಮ ಸಿನಿಮಾದ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿದ್ದರು. ಅಲ್ಲದೆ ಇಷ್ಟು ದಿನ ರಾಜಮೌಳಿ ತಂಡದಲ್ಲಿ ಮಲಯಾಳಂ ಸ್ಟಾರ್​ ಪೃಥ್ವಿರಾಜ್​​​​ ಸುಕುಮಾರನ್​​​ ಅವರು ಸೇರಲಿದ್ದಾರೆ ಎಂಬ ಸುದ್ಧಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತಿತ್ತು. ಈ ವದಂತಿಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸ್ವತಃ ಪೃಥ್ವಿರಾಜ್​ ಅವರೇ ಪ್ರತಿಕ್ರಿಯಿಸಿದ್ದರು. ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಕೇಳಿದಾಗ, ಎಲ್ಲರಿಗೂ ಚಿತ್ರದ ಬಗ್ಗೆ ನನಗಿಂತ ಹೆಚ್ಚು ತಿಳಿದಿದೆ. ನೋಡಿ ಇನ್ನೂ ಯಾವುದನ್ನೂ ದೃಢೀಕರಿಸಲಾಗಿಲ್ಲ. ಚರ್ಚಿಸಲು ಇನ್ನೂ ಸಾಕಷ್ಟು ಇದೆ ಎಂದಿದ್ದರು.

ಇದೀಗ SSMB29 ಚಿತ್ರದ ತಾರಾಬಳಗಕ್ಕೆ ಸಂಬಂಧಿಸಿದಂತೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಇದೀಗ ಪ್ರಿಯಾಂಕಾ ಚೋಪ್ರಾ ನಂತರ ಈ ಚಿತ್ರದಲ್ಲಿ ಪೃಥ್ವಿರಾಜ್ ಬದಲಿಗೆ ಮತ್ತೊಬ್ಬ ಬಾಲಿವುಡ್ ನಟನ ಹೆಸರು ಸೇರ್ಪಡೆಯಾಗಿದೆ. ಸಿನಿಮಾದಲ್ಲಿ ಪೃಥ್ವಿರಾಜ್ ಬದಲಿಗೆ ಜಾನ್ ಅಬ್ರಹಾಂ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರವನ್ನು ಇನ್ನೂ ಚಿತ್ರತಂಡ ಅಧಿಕೃತವಾಗಿ ಧೃಡಪಡಿಸಿಲ್ಲ.

ಕೆಲ ದಿನಗಳ ಹಿಂದೆ ಶೂಟಿಂಗ್‌ಗಾಗಿ ಪ್ರಿಯಾಂಕಾ ಹೈದರಾಬಾದ್ ತಲುಪಿದ್ದರು. ವಾಸ್ತವವಾಗಿ ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಮತ್ತು ಮಹೇಶ್ ಬಾಬು ಅವರ SSMB29 ಸಿನಿಮಾದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್ ಅವರನ್ನು ಬದಲಿಸಲಾಗಿದೆ. ಪ್ರಿಯಾಂಕಾ ಚೋಪ್ರಾ ಜತೆಗೆ ಜಾನ್​ ಅಬ್ರಹಾಂ ಹಲವು ದೃಶ್ಯಗಳನ್ನು ಹೊಂದಿದ್ದು ಹೈದರಾಬಾದ್‌ನಲ್ಲಿ ಮಾತ್ರ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

ಪ್ರಿಯಾಂಕಾ ಮತ್ತು ಮಹೇಶ್ ಬಾಬು ತಮ್ಮ ಪಾತ್ರಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಜಾನ್ ಶೀಘ್ರದಲ್ಲೇ ಅವರನ್ನು ಸೇರುವ ಸಾಧ್ಯತೆಯಿದೆ. ಮತ್ತೊಂದೆಡೆ ಜಾನ್ ಅಬ್ರಹಾಂ ತಮ್ಮ 'ದಿ ಡಿಪ್ಲೋಮ್ಯಾಟ್' ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಚಲನಚಿತ್ರವು ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದ ಭಾರತೀಯ ಹುಡುಗಿಯನ್ನು ರಕ್ಷಿಸುವ ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸುತ್ತದೆ. ಕುಮುದ್ ಮಿಶ್ರಾ, ಶರೀಬ್ ಹಶ್ಮಿ ಮತ್ತು ಅಶ್ವಥ್ ಭಟ್ ಅಭಿನಯದ ಈ ಚಿತ್ರ ಮಾರ್ಚ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net