ಬಿಇ ಪದವೀಧರರೆ? ಎಂಎಸ್​ಎಂಇಯಲ್ಲಿ ಮ್ಯಾನೇಜರ್ ಆಗಿ

MSME
Published on

ಬೆಂಗಳೂರು: ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್​ಎಂಇ) ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ 10 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೀನಿಯರ್ ಮ್ಯಾನೇಜರ್ (ಟ್ರೇನಿಂಗ್), ಮ್ಯಾನೇಜರ್- ಟೆಸ್ಟಿಂಗ್, ಮಾರ್ಕೆಟಿಂಗ್, ಅಸಿಸ್ಟೆಂಟ್ ಮ್ಯಾನೇಜರ್ (ಅಡ್ಮಿನ್ ಆ್ಯಂಡ್ ಅಕೌಂಟ್ಸ್) ಸೀನಿಯರ್ ಇಂಜಿನಿಯರ್ - (ಡಿಸೈನ್) ಮೆಕಾನಿಕಲ್, ಸೀನಿಯರ್ ಇಂಜಿನಿಯರ್ (ಟ್ರೇನಿಂಗ್) ಎಲೆಕ್ಟ್ರಾನಿಕ್ಸ್, ಇಂಜಿನಿಯರ್ (ಪ್ರೊಡಕ್ಷನ್), ಇಂಜಿನಿಯರ್ (ಟ್ರೇನಿಂಗ್) (ಇಲೆಕ್ಟ್ರಾನಿಕ್ಸ್), ಅಕೌಂಟ್ಸ್ ಆಫೀಸರ್, ಸ್ಟೋರ್ಸ್ ಆಫೀಸರ್ ತಲಾ ಒಂದೊಂದು ಹುದ್ದೆಗಳಿವೆ.

ಆಯಾ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ/ ಪದವಿ ಪಾಸಾಗಿರಬೇಕು. ಕಾರ್ಯಾನುಭವ ಹೊಂದಿರಬೇಕು. ವಿದ್ಯಾರ್ಹತೆ, ವಯೋಮಿತಿ, ಇತ್ಯಾದಿ ವಿವರಗಳಿಗೆ ಸಂಪೂರ್ಣ ಅಧಿಸೂಚನೆ ನೋಡಬಹುದು. www.idemi.org ಅಥವಾ www.msmetcblr.org ನಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟೆಂಬರ್ 20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ http://www.idemi.org ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net