

ನವದೆಹಲಿ: ಅರಣ್ಯ ಸಂಶೋಧನಾ ಸಂಸ್ಥೆ (ಎಫ್‌ಆರ್‌ಐ) ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಗ್ರಂಥಾಲಯ ಮಾಹಿತಿ ಸಹಾಯಕ, ತಾಂತ್ರಿಕ ಸಹಾಯಕ, ಸ್ಟೆನೋಗ್ರಾಫರ್ ಮತ್ತು ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ (ಎಂಟಿಎಸ್) ಹುದ್ದೆಗಳಿವೆ.
Fri.icfre.gov.in ನಲ್ಲಿ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಒಟ್ಟು 107 ಖಾಲಿ ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಒಟ್ಟು ಹುದ್ದೆಗಳು- 107 (ಗ್ರಂಥಾಲಯ ಮಾಹಿತಿ ಸಹಾಯಕ - 1, ತಾಂತ್ರಿಕ ಸಹಾಯಕ - 62, ಸ್ಟೆನೋಗ್ರಾಫರ್ - 4, ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ - 40) ಇರುತ್ತವೆ.
ಇದನ್ನೂ ಓದಿ: ಶುಕ್ರವಾರ ಕೆ-ಸಿಇಟಿ ಫಲಿತಾಂಶ ಪ್ರಕಟ
ಗ್ರಂಥಾಲಯ ಮಾಹಿತಿ ಸಹಾಯಕ ಹುದ್ದೆಗೆ ಪದವಿ, ಗ್ರಂಥಾಲಯ ವಿಜ್ಞಾನ ವಿಷಯದಲ್ಲಿ ಪದವಿ ಆಗಿರಬೇಕು. ತಾಂತ್ರಿಕ ಸಹಾಯಕ ಹುದ್ದೆಗೆ ವಿಜ್ಞಾನ ಪದವಿ ಆಗಿರಬೇಕು. ಸ್ಟೆನೋಗ್ರಾಫರ್ - 12 ನೇ ಉತ್ತೀರ್ಣರಾಗಿಬೇಕು. ನಿಗದಿತ ವೇಗದ ಸ್ಟೆನೋಗ್ರಫಿ (ಇಂಗ್ಲಿಷ್/ ಹಿಂದಿ) ಕೌಶಲ, ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್ ಆಗಿರಬೇಕು. ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ ಹುದ್ದೆಗೆ 10 ನೇ ತರಗತಿ ಪಾಸಾಗಿರಬೇಕು.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://frirecruitment.icfre.gov.in ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಬಹುದು.