ಬಿಇ ಪದವೀಧರರಿಗೆ ಬಿಇಎಲ್​ನಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗುವ ಅವಕಾಶ

BEL
Published on

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಪ್ರಾಜೆಕ್ಟ್ ಎಂಜಿನಿಯರ್‌ (ಮೆಡಿಕಲ್ ಡಿವೈಸಸ್) ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಒಟ್ಟು 60 ಹುದ್ದೆಗಳಿವೆ. ಸಂಬಂಧಿಸಿದ ವಿಭಾಗದಲ್ಲಿ ಅಭ್ಯರ್ಥಿಯು ಅಂಗೀಕೃತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣಾವಧಿಯ ಬಿಇ / ಬಿಟೆಕ್ / ಬಿಎಸ್ಸಿ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.

ಗರಿಷ್ಠ ವಯೋಮಿತಿ 28 ನಿಗದಿಪಡಿಸಲಾಗಿದ್ದು, ಅರ್ಹರಿಗೆ ಸೂಕ್ತ ವಯೋ ಸಡಿಲಿಕೆ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 26 ರ ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ http://bel-india.in ವೆಬ್​ಸೈಟ್ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net