ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಐಡಿಎಐ

UIDAI
Published on

ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನವದೆಹಲಿಯ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಇತರ ವಿವರಗಳಿಗಾಗಿ https://uidai.gov.in ಸಂಪರ್ಕಿಸಬಹುದಾಗಿದೆ.

ಉಪ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಕೋರಿದ್ದು, ಈ ಕೆಳಕಂಡ ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಕೋರಿದೆ.

ಹುದ್ದೆ: ಉಪ ವ್ಯವಸ್ಥಾಪಕ ಹುದ್ದೆ

ಅರ್ಹತೆಗಳು: ಅಭ್ಯರ್ಥಿಗಳು ಕಾನೂನು ವಿಷಯದಲ್ಲಿ ಅರ್ಹ ವಿಶ್ವವಿದ್ಯಾನಿಲಯ ಅಥವಾ ಕಾನೂನು ವಿದ್ಯಾಲಯದಲ್ಲಿ ಪದವಿಯನ್ನು ಗಳಿಸಿರಬೇಕು ಮತ್ತು ವೃತ್ತಿಪರ/ಶೈಕ್ಷಣಿಕ/ಸಂಶೋಧನಾ ಅನುಭವದೊಂದಿಗೆ ಎಲ್ ಎಲ್ ಎಂ ಪದವಿ ಪಡೆದಿರಬೇಕು.

ಸ್ಥಳ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಮುಖ್ಯ ಕಚೇರಿ, ದೆಹಲಿ

ಅನುಭವ: 8 ವರ್ಷ

ಒಪ್ಪಂದದ ಅವಧಿ: ಮೂರು ವರ್ಷ ಅಥವಾ ಟಿಎಸ್ ಯು ಒಪ್ಪಂದದವರೆಗೆ

Koo App
#Recruitment #UIDAI invites #applications for the various post on a contractual basis through @NISGsmartgov at its headquarters in #NewDelhi. For more information and other details please visit: https://uidai.gov.in @meity @mygovindia
View attached media content
-@UIDAI (@UIDAI)1 July 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net