ಕೃತಕ ಬುದ್ಧಿಮತ್ತೆಯಿಂದ ಅಮೂಲಾಗ್ರ ಬದಲಾವಣೆ

17 smg 8
Published on

ಶಿವಮೊಗ್ಗ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೇಲಿನ ಅವಲಂಬನೆಯಿಂದ ಆರೋಗ್ಯ, ಕೃಷಿ ಕ್ಷೇತ್ರ ಸೇರಿದಂತೆ ಸಮಾಜದಲ್ಲಿ ಅನೇಕ ಅಮೂಲಾಗ್ರ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿದೆ ಎಂದು ಫೋರಸ್ ಹೆಲ್ತ್ ಕಂಪನಿ ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ದೀಪ್ತಿ ಪ್ರಸಾದ್ ಹೇಳಿದರು.

ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನೂತನವಾಗಿ ಕಾರ್ಯಾರಂಭಗೊಂಡ ಎಐಎಂಎಲ್(ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್) ಇಂಜಿನಿಯರಿಂಗ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಿಕ ಬುದ್ದಿಮತ್ತೆಯ ತಂತ್ರಜ್ಞಾನದ ಕಲಿಕೆಯಲ್ಲಿ ಯಾವುದೇ ಗೊಂದಲ ಬೇಡ. ಮಾನವನಗಿಂತ ಮಿಗಿಲಾದ ಮತ್ತೊಂದು ತಂತ್ರಜ್ಞಾನವಿಲ್ಲ. ಆದರೂ ಎಲ್ಲ ನಾವೀನ್ಯ ತಂತ್ರಜ್ಞಾನಗಳ ಕಲಿಕೆ ಜತೆಗೆ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಉಬರ್, ಓಲಾ ಕಂಪನಿಗಳು ತಮ್ಮ ಸೇವೆಗಳ ಪರಿಣಾಮಕಾರಿ ನಿರ್ವಹಣೆಗೆ ಎಐಎಂಎಲ್ ಬಳಸಲಾಗುತ್ತಿದೆ. ವಿಮಾನಗಳ ಚಲಾವಣೆಯಲ್ಲಿ ಆಟೋಮೊಡ್ ನಿರ್ವಹಣೆಯಲ್ಲಿ ಎಐಎಂಎಲ್ ಅನುಷ್ಠಾನಗೊಳಲಾಗಿದೆ. ಒಂದು ಕಣ್ಣಿನಲ್ಲಿ ಉಂಟಾಗುವ ದೋಷಗಳನ್ನು ತಕ್ಷಣವೇ ಗುರುತಿಸಿ ಚಿಕಿತ್ಸೆ ನೀಡಲು ಎಐ ತಂತ್ರಜ್ಞಾನದಿಂದ ಸಾಧ್ಯ. ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮಾಡುತ್ತಿರುವ ಅನೇಕ ಬದಲಾವಣೆಗಳ ಬಗ್ಗೆ ಜನರಲ್ಲಿ ಅರಿವಿದ್ದರೂ ದೈನಂದಿನ ಆರೋಗ್ಯ ತಪಾಸಣೆಯಲ್ಲಿ ಹಿಂಜರಿಕೆ ತೋರುತ್ತಿರುವುದು ವಿಷಾದನೀಯ ಎಂದರು.

ಎನ್‌ಇಎಸ್ ಮಾಜಿ ಅಧ್ಯಕ್ಷ ಎ.ಎಸ್.ವಿಶ್ವನಾಥ ಮಾತನಾಡಿ, ಎಐಎಂಎಲ್ ನೂತನ ಕೋರ್ಸ್ ಕಾಲೇಜಿನಲ್ಲಿ ಪ್ರಾರಂಭಿಸುವ ಮೂಲಕ ಮಲೆನಾಡಿನ ವಿದ್ಯಾರ್ಥಿಗಳಿಗೆ ಹೊಸತನದ ಕಲಿಕೆಗೆ ಪೂರಕ ವೇದಿಕೆ ನಿರ್ಮಾಣ ಮಾಡಲಾಗಿದೆ. ಇಂತಹ ನಿಸ್ವಾರ್ಥ ಚಿಂತನೆಗಳೇ ಎನ್‌ಇಎಸ್ ಸಂಸ್ಥೆ ಸಾಧನೆಯ ರಹದಾರಿ ಎಂದು ಹೇಳಿದರು.

ಇದೇ ವೇಳೆ ವಿಭಾಗದ ನೂತನ ತರಗತಿಗಳು, ಲ್ಯಾಬ್ ಗಳನ್ನು ಉದ್ಘಾಟಿಸಲಾಯಿತು. ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಎಚ್.ಸಿ.ಶಿವಕುಮಾರ್, ಅಜೀವ ಸದಸ್ಯೆ ರುಕ್ಮಿಣಿ ವೇದವ್ಯಾಸ, ರವೀಂದ್ರ, ಕುಲಸಚಿವ ಪ್ರೊ. ಟಿ.ಎಸ್.ಹೂವಯ್ಯಗೌಡ, ಪ್ರಾಚಾರ್ಯ ಡಾ. ಕೆ.ನಾಗೇಂದ್ರಪ್ರಸಾದ್, ವಿಭಾಗದ ಮುಖ್ಯಸ್ಥ ಡಾ. ಕೆ.ಆರ್.ಚೇತನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net