

ವಾಲ್ಮೀಕಿ ಅವರ ರಾಮಾಯಣ ಆಧರಿಸಿ ಬರೆದ ಕನ್ನಡ ಹಾಗೂ ತೆಲುಗು ಕೃತಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಅಷ್ಟೊಂದು ಅದ್ಭುತವಾದ ಶಕ್ತಿ ಈ ಮಹಾಕಾವ್ಯಕ್ಕೆ ಇದೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಪ್ರಾಯವ್ಯಕ್ತಪಡಿಸಿದರು.
ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್ ವತಿಯಿಂದ ವಿವಿ ಸಂಜೆ ಕಾಲೇಜು ಎದುರು ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಕೂಡ ರಾಮಾಯಣ ಹಾಗೂ ಮಹಾಭಾರತ ದೇಶದ ಶ್ರೇಷ್ಠ ಗ್ರಂಥಗಳಾಗಿವೆ. ವಿದೇಶಗಳ ಜನ ಈಗಲೂ ಈ ಎರಡು ಮಹಾಗ್ರಂಥಗಳ ಬಗ್ಗೆ ವಿಚಾರಿಸುತ್ತಾರೆ. ಅವು ಅಷ್ಟೊಂದು ಪರಿಣಾಮ ಬೀರಿವೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ನಾವು ಈಗಲೂ ಪ್ರಸ್ತಾಪಿಸುವ ರಾಮರಾಜ್ಯ ಪರಿಕಲ್ಪನೆಗೆ ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯ ಕಾರಣ. ಬೇಟೆಗಾರನಾಗಿದ್ದ ವಾಲ್ಮೀಕಿ ನಂತರ ಮನಃಪರಿವರ್ತನೆ ಮಾಡಿಕೊಂಡು ಈ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇವತ್ತಿಗೂ ರಾಮರಾಜ್ಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ಆದಕ್ಕೆ ರಾಮಾಯಣ ಕಾರಣ ಎಂದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ವಾಲ್ಮೀಕಿ ಕೇವಲ ರಾಮಾಯಣ ರಚಿಸಲಿಲ್ಲ. ಈ ಮಹಾಗ್ರಂಥದಲ್ಲಿ ಒಂದು ಪಾತ್ರವಾಗಿಯೂ ಇದ್ದಾರೆ. ತಮ್ಮ ಆವಾಸ ಸ್ಥಾನದಲ್ಲಿಯೇ ಸೀತೆಗೆ ಆಶ್ರಯ ನೀಡಿದ್ದಲ್ಲದೆ, ಅವರಿಬ್ಬರ ಮಕ್ಕಳಿಗೆ ಲವ-ಕುಶ ಎಂದು ನಾಮಕರಣ ಮಾಡಿದವರು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸರ್ವ ಮಹನೀಯರ ಸಂದೇಶಗಳು ಶಾಂತಿ, ಸಾಮರಸ್ಯ, ಸೌಹಾರ್ದ, ಸಹಬಾಳ್ವೆ ಸಾರುತ್ತವೆ. ಇದನ್ನು ಪಾಲಿಸಿದರೆ ಸಮಾಜಕ್ಕೆ ಒಳಿತು ಎಂದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಕೆ.ಸಿ.ಮಹದೇಶ್ ಮಾತನಾಡಿದರು. ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎಂ.ಕೆ.ಮಹೇಶ್, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ.ಜ್ಯೋತಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ, ವೇದಿಕೆಯ ಅಧ್ಯಕ್ಷ ಆರ್.ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಸಹ ಕಾರ್ಯದರ್ಶಿ ಯೋಗೇಶ್, ಸಂಚಾಲಕ ವಿವೇಕ್, ಖಜಾಂಚಿ ಗಣೇಶ್, ನಿರ್ದೇಶಕರಾದ ಡಾ.ನವೀನ್ ಕುಮಾರ್, ಚಿದಾನಂದ ಇತರರಿದ್ದರು.
ಇದೇ ವೇಳೆ ಪ್ರಾಧ್ಯಾಪಕರಾದ ರಾಮು, ವೈ.ಬಿ.ಬಸವರಾಜು, ಬಿ.ಕೆ.ರವೀಂದ್ರನಾಥ್, ಪ್ರಭು, ಡಿ.ಕೆ.ಶಂಕರಲಿಂಗೇಗೌಡ, ಶ್ರೀಕಂಠ, ಟಿ.ದೇಮಪ್ಪ, ಕೃಷ್ಣರಾಜ ಉಪವಿಭಾಗದ ಎಸಿಪಿ ಎಚ್.ಬಿ.ರಮೇಶ್ ುಮಾರ್, ತೋಟಗಾರಿಕೆ ವಿಭಾಗದ ಮಂಚಯ್ಯ ಅವರನ್ನು ಸನ್ಮಾನಿಸಲಾಯಿತು.